` ಸುಮಲತಾ ಬೆಂಬಲಕ್ಕೆ ರಾಕ್‍ಲೈನ್, ದೊಡ್ಡಣ್ಣ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rockline and doddanna supports sumalatha
Doddanna, Abhishek, Sumalatha, Rockline Venlatesh

ಗಂಡ ಸತ್ತ ತಿಂಗಳಿಗೆಲ್ಲ ಈಯಮ್ಮನಿಗೆ ರಾಜಕೀಯ ಬೇಕಿತ್ತಾ..? ಕ್ಷಮೆ ಕೇಳಲ್ರೀ.. ಕ್ಷಮೆ ಕೇಳುವಂತ ತಪ್ಪು ಏನ್ ಮಾಡಿದ್ದೀನಿ ನಾನು..? ಹಿಂದೂ ಸಂಸ್ಕøತಿ ಪ್ರಕಾರವೇ ಮಾತನಾಡಿದ್ದೀನಿ.. ಇವು ಸಚಿವ ಹೆಚ್.ಡಿ.ರೇವಣ್ಣ ಸುಮಲತಾ ವಿರುದ್ಧ ಆಡಿರುವ ಮಾತುಗಳು. ರೇವಣ್ಣನವರ ಈ ಮಾತು ಚಿತ್ರರಂಗದವರನ್ನು ಕೆರಳಿಸಿದೆ. ಅದರಲ್ಲೂ ಅಂಬಿ ಆಪ್ತಬಳಗದಲ್ಲಿದ್ದ ರಾಕ್‍ಲೈನ್, ದೊಡ್ಡಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೊಡ್ಡಣ್ಣ : ಜನರಿಗೆ ಯಾರನ್ನು ಯಾವಾಗ ಮನೆಗೆ ಕಳುಹಿಸಬೇಕು ಎಂದು ಗೊತ್ತಿದೆ. ಜನರೇ ನಿರ್ಧರಿಸ್ತಾರೆ ಬಿಡಿ.

ರಾಕ್‍ಲೈನ್ ವೆಂಕಟೇಶ್ : ಇದರ ಬಗ್ಗೆ ನಾನು ಏನೂ ಮಾತನಾಡೋದಿಲ್ಲ. ಅಂಬರೀಷ್ ನನ್ನ ಪಾಲಿಗೆ ಅಣ್ಣನಂತೆ ಇದ್ದವರು. ಸುಮಲತಾ ಅವರೊಂದಿಗೆ ನಾವಿರುತ್ತೇವೆ. ಉಳಿದದ್ದು ಜನರಿಗೆ ಬಿಟ್ಟಿದ್ದು