ಮಿಸ್ಸಿಂಗ್ ಬಾಯ್. ಫಸ್ಟ್ ರ್ಯಾಂಕ್ ರಾಜು ಗುರುನಂದನ್ ಅಭಿನಯದ ಹೊಸ ಸಿನಿಮಾ. ರಘುರಾಮ್ ನಿರ್ದೇಶನದ ಈ ಸಿನಿಮಾಗೆ ನೈಜ ಘಟನೆಗಳೇ ಪ್ರೇರಣೆ. ದೊಡ್ಡ ದೊಡ್ಡ ಸ್ಟಾರ್ ಡಮ್ ಇಲ್ಲದ ಚಿತ್ರದ ಟ್ರೇಲರ್‍ನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿ ಬೆನ್ನುತಟ್ಟಿದ್ದಾರೆ.
ಮಿಸ್ಸಿಂಗ್ ಬಾಯ್ ಅನ್ನೋದು ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿ ಕಳೆದುಕೊಂಡು ಬೇರೆ ದೇಶ ಸೇರುವ ಯುವಕರು, ಮತ್ತೆ ತಮ್ಮ ಹೆತ್ತವರಿಗಾಗಿ ಹುಡುಕಿಕೊಂಡು ಬರುವ ಕಥೆ. ಸುದೀಪ್‍ಗೆ ಈ ಕಾರಣಕ್ಕೇ ಚಿತ್ರ ಇಷ್ಟವಾಗಿ ಹೋಗಿದೆ.
ಯಾವುದೇ ಚಿತ್ರಕ್ಕೆ ಕಂಟೆಂಟ್ ಈಸ್ ಕಿಂಗ್. ಕಂಟೆಂಟ್ ಅದ್ಭುತವಾಗಿರುವ ಚಿತ್ರಗಳು ಗೆಲ್ಲುತ್ತಿವೆ. ಸ್ಟಾರ್ ಡಮ್ ಚಿತ್ರಗಳೂ ಈ ಕಂಟೆಂಟ್ ಚಿತ್ರಗಳ ಎದುರು ಅಲ್ಲಾಡುತ್ತಿವೆ. ಆದರೆ, ಇಂತಹ ಚಿತ್ರಗಳಿಗೆ ಭರ್ಜರಿ ಓಪನಿಂಗ್ ಇರಲ್ಲ. ಒಮ್ಮೆ ಪ್ರೇಕ್ಷಕ ಥಿಯೇಟರಿಗೆ ಬಂದು ಇಷ್ಟಪಟ್ಟರೆ, ತಾನು ಇಷ್ಟಪಟ್ಟಿದ್ದನ್ನು ಇತರರಿಗೂ ಹೇಳಿದರೆ, ಸಾಕು. ಚಿತ್ರ ಹಿಟ್ ಆಗಿಬಿಡುತ್ತೆ ಎಂದಿದ್ದಾರೆ ಕಿಚ್ಚ.
ಚಿತ್ರದ ಟ್ರೇಲರ್‍ಗೆ ಧ್ವನಿ ನೀಡಿರುವುದು ಶಿವರಾಜ್‍ಕುಮಾರ್. ಟ್ರೇಲರ್ ರಿಲೀಸ್ ಮಾಡಿರುವುದು ಕಿಚ್ಚ ಸುದೀಪ್.