` ಸುಮಲತಾ ಪರ ಪ್ರಚಾರ - ಸುದೀಪ್ ಹೇಳಿದ್ದೇನು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sudeep reacts on sumalatha's political campaign
Sumalatha, Sudeep

ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದು 100% ಪಕ್ಕಾ. ಕಾಂಗ್ರೆಸ್ ಟಿಕೆಟ್ ಇಲ್ಲ ಎಂದಿರುವ ಕಾರಣ, ಅವರು ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚು. ಇನ್ನು ಚಿತ್ರರಂಗದಿಂದ ಸುಮಲತಾ ಪರ ಯಾರು ಪ್ರಚಾರಕ್ಕೆ ಹೋಗ್ತಾರೆ ಎಂಬ ಬಗ್ಗೆ ಅನುಮಾನಗಳೇನೂ ಇಲ್ಲ. ದರ್ಶನ್, ಅಮ್ಮನ ಪರ ಪ್ರಚಾರ ಮಾಡ್ತೀನಿ ಎಂದು ಈಗಾಗಲೇ ಘೋಷಿಸಿ ಆಗಿದೆ. ಯಶ್ ಕೂಡಾ ಹೋಗಬಹುದು. ಸುದೀಪ್ ಹೋಗ್ತಾರಾ..?

ಈ ಪ್ರಶ್ನೆಗೆ ಸುದೀಪ್ ಕೊಟ್ಟಿರುವ ಉತ್ತರ ಇದು. ಅಲ್ಲಿ ದರ್ಶನ್ ಹೋಗ್ತಾರೆ.  ದರ್ಶನ್ ಇರುವಾಗ ಅಲ್ಲಿ ನಾನ್ಯಾಕೆ..? ನನಗೆ ಯಾರೂ ಕರೆದಿಲ್ಲ. ನಾನು ರಾಜಕೀಯದಿಂದ ದೂರ. ನನ್ನನ್ನು ನಂಬಿ ಹಲವು ನಿರ್ಮಾಪಕರು ಹಣ ಹಾಕಿದ್ದಾರೆ. ಹಾಗಾಗಿ ನಾನು ಸಿನಿಮಾಗಳಲ್ಲಿ ಬ್ಯುಸಿ ಎಂದಿದ್ದಾರೆ ಕಿಚ್ಚ ಸುದೀಪ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery