ಬಸಣ್ಣಿ ಬಾ.. ಹಾಡಿನ ಮೂಲಕ ಕನ್ನಡ ಚಿತ್ರ ರಸಿಕರ ಎದೆಗೇ ಲಗ್ಗೆ ಇಟ್ಟಿರುವ ತಾನ್ಯಾ ಹೋಪ್, ಈಗ ಕನ್ನಡದಲ್ಲಿ ಬ್ಯುಸಿ ನಟಿ. ಅಭಿಷೇಕ್ ಅಂಬರೀಷ್ ಪ್ರಥಮ ಸಿನಿಮಾ ಅಮರ್ ಚಿತ್ರಕ್ಕೂ ಅವರೇ ನಾಯಕಿ. ಒಂದು ಸಿನಿಮಾ ರಿಲೀಸ್ ಆಗಿ ಹಿಟ್ ಆಗಿದ್ದರೆ, ಇನ್ನೊಂದು ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಹೀಗಿರುವಾಗಲೇ ಮತ್ತೊಂದು ಚಿತ್ರಕ್ಕೆ ಆಯ್ಕೆಯಾಗಿದ್ದಾರೆ ತಾನ್ಯಾ ಹೋಪ್.
ಚಿರಂಜೀವಿ ಸರ್ಜಾ ಅಭಿನಯದ ಖಾಕಿ ಚಿತ್ರಕ್ಕೆ ತಾನ್ಯಾ ನಾಯಕಿ. ತರುಣ್ ಶಿವಪ್ಪ ನಿರ್ಮಾಣದ ಈ ಚಿತ್ರಕ್ಕೆ ನವೀನ್ ರೆಡ್ಡಿ ನಿರ್ದೇಶನವಿದೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದ ಶೂಟಿಂಗ್ ಹೈದರಾಬಾದ್ನಲ್ಲಿ ನಡೆಯಲಿದೆ.