ದರ್ಶನ್ ನನ್ನ ದೊಡ್ಡ ಮಗ ಇದ್ದಂತೆ ಎನ್ನುತ್ತಿದ್ದರು ಅಂಬರೀಷ್. ದರ್ಶನ್ ಕೂಡಾ ಹಾಗೆಯೇ ಇದ್ದಾರೆ. ಅಭಿಷೇಕ್ರನ್ನು ಅಷ್ಟೇ ಪ್ರೀತಿಯಿಂದ ತಮ್ಮ ಎನ್ನುತ್ತಾರೆ. ಅದೇ ಮಾತನ್ನು ಈಗ ಸುಮಲತಾ ಕೂಡಾ ಹೇಳಿದ್ದಾರೆ.
ದರ್ಶನ್ ನನ್ನ ದೊಡ್ಡ ಮಗ. ಯಶ್ ಮನೆ ಮಗ ಎಂದಿರೋ ಸುಮಲತಾ ದರ್ಶನ್ಗೆ ನೋಡಪ್ಪ, ನಾನು ಅಭಿಷೇಕ್ ಕಡೆಯಿಂದ ಏನೇನೆಲ್ಲ ನಿರೀಕ್ಷೆ ಮಾಡ್ತೀನೋ, ನಿನ್ನಿಂದಲೂ ಅದನ್ನೇ ನಿರೀಕ್ಷೆ ಮಾಡ್ತೀನಿ ಅಂತಾರಂತೆ. ಆಗೆಲ್ಲ ದರ್ಶನ್ ಹೇಳೋದು ಒಂದೇ ಮಾತು. ನೀವು ಅಭಿಷೇಕ್ ಕಡೆಯಿಂದ ಏನೇನು ನೋಡ್ತೀರೋ, ನನ್ನಿಂದ ಅದರ ಎರಡರಷ್ಟು ನಿರೀಕ್ಷೆ ಮಾಡಿ ಅಂತಾನೆ.
ಮಂಡ್ಯದಲ್ಲಿ ಚುನಾವಣಾ ಅಖಾಡಕ್ಕಿಳಿದಿರುವ ಸುಮಲತಾ, ಸ್ವತಃ ಈ ಮಾತು ಹೇಳಿದ್ದಾರೆ. ಅಲ್ಲಿಗೆ ದರ್ಶನ್ ಮತ್ತು ಯಶ್ ಸುಮಲತಾ ಪರ ಪ್ರಚಾರಕ್ಕೆ ಬರೋದು ಹೆಚ್ಚು ಕಡಿಮೆ ಕನ್ಫರ್ಮ್.
ದರ್ಶನ್ ಅವರಂತೂ ನಾನು ಸುಮಲತಾ ಅವರ ಜೊತೆ ಇರ್ತೇನೆ. ನನಗೆ ಪಕ್ಷ ಬೇಕಿಲ್ಲ. ನನ್ನವರು ಮುಖ್ಯ ಎಂದಿದ್ದಾರೆ.