ರವಿಚಂದ್ರನ್ ಅಭಿನಯದ ದಶರಥ ಇನ್ನೇನು ರಿಲೀಸ್ ಆಗಲಿದೆ ಎಂದು ಕಾದು ಕುಳಿತಿದ್ದವರಿಗೆ ಶಾಕಿಂಗ್ ನ್ಯೂಸ್. ದಶರಥ ಚಿತ್ರದ ಒಂದು ಹಾಡು ಈಗ ವಿವಾದಕ್ಕೊಳಗಾಗಿದೆ. ಕರಿಕೋಟು ಹಾಕೊರೆಲ್ಲ.. ಕೇಸು ಗೆಲ್ಲೋದಿಲ್ಲ.. ಕೇಸು ಗೆದ್ದೋರೆಲ್ಲ.. ಹರಿಶ್ಚಂದ್ರರಲ್ಲ.. ಎಂಬ ಹಾಡು ಈಗ ವಿವಾದದ ಕೇಂದ್ರಬಿಂದು.
ಇದೇ ಹಾಡಿನ ಸಾಹಿತ್ಯದ ವಿರುದ್ಧ ಈಗ ಬೆಂಗಳೂರಿನ ವಕೀಲ ಗಡಿಲಿಂಗಪ್ಪ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. 1 ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಚಿತ್ರದ ಗೀತರಚನೆಕಾರ, ಗಾಯಕ, ನಿರ್ದೇಶಕ, ಸಂಗೀತ ನಿರ್ದೇಶಕ , ಲಹರಿ ಆಡಿಯೋ ಸಂಸ್ಥೆ ಹಾಗೂ ನಿರ್ಮಾಪಕರ ವಿರುದ್ಧ ಕೇಸ್ ಹಾಕಿದ್ದಾರೆ. ಯುದ್ಧಕಾಂಡ ಚಿತ್ರದ ನಂತರ ರವಿಚಂದ್ರನ್ ವಕೀಲರಾಗಿ ಕಾಣಿಸಿಕೊಳ್ತಿರೋ ಚಿತ್ರಕ್ಕೆ ಎಂ.ಎಸ್.ರಮೇಶ್ ನಿರ್ದೇಶಕ. ಅಕ್ಷಯ್ ಎಂಬುವವರು ಚಿತ್ರದ ನಿರ್ಮಾಪಕರು.