ತಾನ್ಯಾ ಹೋಪ್ ಅಂದ್ರೆ ಯಾರು ಎನ್ನುವವರಿಗೆ ಬಸಣ್ಣಿ ಎಂದರೆ.. ಬಸಣ್ಣಿ ಬಾ.. ಬಾ.. ಎನ್ನುತ್ತಾರೆ.. ಅಷ್ಟರಮಟ್ಟಿಗೆ ಸಾಂಗ್ ಹಿಟ್ ಆಗಿದೆ. ಯಜಮಾನ ಚಿತ್ರದಲ್ಲಿ ಇಬ್ಬರು ನಾಯಕಿಯರು. ಒಬ್ಬರು ರಶ್ಮಿಕಾ ಮಂದಣ್ಣ, ಮತ್ತೊಬ್ಬರು ತಾನ್ಯಾ ಹೋಪ್. ಮೂಲತಃ ಮುಂಬೈನವರು.
ವೃತ್ತಿಯಲ್ಲಿ ಮಾಡೆಲ್ ಆಗಿದ್ದ ತಾನ್ಯಾ ಹೋಪ್, ತೆಲುಗು, ಹಿಂದಿಯಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ ಯಜಮಾನನ ಜೊತೆಗೆ ಯಜಮಾನನ ತಮ್ಮ ಅಮರ್ ಚಿತ್ರಕ್ಕೂ ಅವರೇ ನಾಯಕಿ. ಸುನಿಲ್ ಕುಮಾರ್ ದೇಸಾಯಿಯವರ ಉದ್ಘರ್ಷ ಚಿತ್ರದಲ್ಲೂ ತಾನ್ಯಾ ಇದ್ದಾರೆ. ಹೀಗಾಗಿಯೇ.. ಅವರು ಕನ್ನಡ ಕಲಿತೂಬಿಟ್ಟಿದ್ದಾರೆ.
`ಮೊದ ಮೊದಲು ತುಂಬಾ ಕಷ್ಟವಾಗುತ್ತಿತ್ತು. ಆದರೆ, ಸುತ್ತಲಿನ ವಾತಾವರಣ ಎಲ್ಲ ಕನ್ನಡಮಯ. ಎಲ್ಲರೂ ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ನಾನೂ ಪ್ರಯತ್ನ ಪಟ್ಟು ಪಟ್ಟೂ.. ಕನ್ನಡ ಕಲಿತೇಬಿಟ್ಟೆ. ಈಗ ಕನ್ನಡವನ್ನು ಆರಾಮ್ ಆಗಿ ಮಾತಾಡ್ತೀನಿ. ಅಷ್ಟೇ ಏಕೆ, ಕನ್ನಡದಲ್ಲೇ ಮೆಸೇಜ್ ಮಾಡ್ತೀನಿ' ಅಂತಾರೆ ತಾನ್ಯಾ ಹೋಪ್.
ಯಜಮಾನ ರಿಲೀಸ್ ದಿನ ಅವರಿಗೆ ತ್ರಿಪಲ್ ಧಮಾಕಾ ಇದೆ. ಅದೇ ದಿನ ಅವರ ತಮಿಳು ಚಿತ್ರವೊಂದು ರಿಲೀಸ್ ಆಗುತ್ತಿದೆ. ಜೊತೆಯಲ್ಲೇ ಅವರೇ ನಾಯಕಿಯಾಗಿರುವ ಅಮರ್ ಚಿತ್ರದ ಟ್ರೇಲರ್, ಯಜಮಾನ ಚಿತ್ರದ ಜೊತೆಯಲ್ಲೇ ಬರುತ್ತಿದೆ.