ಯೋಗರಾಜ್ ಭಟ್ ನಿರ್ದೇಶನದ, ಹೊಸ ಹುಡುಗ-ಹುಡುಗಿಯರನ್ನೇ ಹಾಕ್ಕೊಂಡು ಮಾಡಿರುವ ಸಿನಿಮಾ ಪಂಚತಂತ್ರ. ಈಗಾಗಲೇ ಪಂಚತಂತ್ರದ ಶೃಂಗಾರದ ಹೊಂಗೇಮರ, ಮಂಕುತಿಮ್ಮನ ಹಾಡುಗಳೆಲ್ಲ ಹಿಟ್ ಆಗಿ, ಕಣ್ಣು, ಕಿವಿಯನ್ನು ರೋಮಾಂಚನಗೊಳಿಸಿವೆ. ಈಗ ಚಿತ್ರದ ರಿಲೀಸ್ ಡೇಟ್ನ್ನೂ ಹೇಳೋ ಮೂಲಕ ದಿನಗಣನೆ ಶುರು ಮಾಡಿಸಿದ್ದಾರೆ ಭಟ್ಟರು.
ಸ್ನೇಹ, ಸಂಬಂಧ, ಸ್ಪರ್ಧೆ, ಸಂಗೀತ ಮತ್ತು ಮನರಂಜನೆಯೇ ಚಿತ್ರದ ಜೀವಾಳ ಎಂದಿರುವ ಭಟ್ಟರು, ಈ ಚಿತ್ರದಲ್ಲಿ ವಿಹಾನ್, ಸೋನಲ್, ಅಕ್ಷರಾ ಗೌಡರನ್ನು ಶೃಂಗಾರದ ಹೊಂಗೆ ಮರಕ್ಕೆ ನೇತು ಹಾಕಿದ್ದಾರೆ. ಅವರನ್ನೆಲ್ಲ ಮಾರ್ಚ್ 29ನೇ ತಾರೀಕು ಪ್ರೇಕ್ಷಕರ ಮುಂದಿಡಲಿದ್ದಾರೆ.