ಒಂದಂತೂ ಸತ್ಯ. ಸತ್ಯವೇ ಇರಬೇಕು. ರಶ್ಮಿಕಾ ಮಂದಣ್ಣ ಅವರದ್ದು ಯಜಮಾನ ಚಿತ್ರದಲ್ಲಿ ಸ್ವಲ್ಪ ಬಜಾರಿ ಎನ್ನಿಸುವ ಪಾತ್ರವೇ ಇರಬೇಕು. ಏಕೆ ಗೊತ್ತೇ.. ರಶ್ಮಿಕಾ ಮಂದಣ್ಣ ಅವರ ಅಭಿನಯ ನೋಡಿದ ಯಜಮಾನ ಚಿತ್ರತಂಡದವರು ರಶ್ಮಿಕಾ ಅವರನ್ನು ಮಂಜುಳಾಗೆ ಹೋಲಿಸಿದ್ದರಂತೆ.
`ಅಯ್ಯೋ ಬಿಡಿ.. ನನಗೆ ಅಷ್ಟೆಲ್ಲ ಸೀನ್ ಇಲ್ಲ. ನನಗೆ ಗೊತ್ತಿರೋದು ನಾನು ಮಾಡಿದ್ದೇನೆ' ಎಂದಿದ್ದಾರೆ ರಶ್ಮಿಕಾ. ಆದರೂ.. ಒಳಗೊಳಗೆ ಆ ಕಾಂಪ್ಲಿಮೆಂಟ್ ಸಿಕ್ಕಾಗ ಖುಷಿಯಾಗಿದ್ದು ಹೌದು. ಸಹಜವೇ ಅಲ್ವೇ.
ಯಜಮಾನ ಚಿತ್ರದಲ್ಲಿ ರಶ್ಮಿಕಾ ಲಂಗ, ದಾವಣಿ, ಮೂಗುತಿ, ಸೆಲ್ವಾರ್.. ಹೀಗೆ ಬೇರೆಯೇ ರೀತಿ ಕಾಣಿಸಿಕೊಂಡಿದ್ದಾರೆ.
ನಿರ್ಮಾಪಕಿ ಶೈಲಜಾ ನಾಗ್, ಬಿ.ಸುರೇಶ್, ಹರಿಕೃಷ್ಣ, ಕುಮಾರ್, ದೇವರಾಜ್ ಎಲ್ಲರೊಂದಿಗೆ ಸಮಯ ಕಳೆಯುವಾಗ ನನಗೆ ಮನೆಯವರೊಂದಿಗೆ ಇದ್ದ ಫೀಲ್ ಆಗುತ್ತಿತ್ತು. ಇಡೀ ಸೆಟ್ಟಿನಲ್ಲಿ ನನಗೆ ಮನೆಯ ವಾತಾವರಣ ಸೃಷ್ಟಿಸಿಕೊಟ್ಟ ಮೊದಲಿಗ ದರ್ಶನ್ ಎಂದಿದ್ದಾರೆ ಕಿರಿಕ್ ಚೆಲುವೆ.. ಅಲ್ಲಲ್ಲ.. ಯಜಮಾನನ ಒಡತಿ.