ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಾಮಾನ್ಯವಾಗಿ ಮಾಧ್ಯಮಗಳಂದ ದೂರ ದೂರ. ಪುರುಸುತ್ತಿದ್ದರೂ ಸಿಕ್ಕಲ್ಲ. ಈಗ ಯಜಮಾನ ರಿಲೀಸ್ ಟೈಂ. ಹಾಗಾಗಿ ಮಾಧ್ಯಮಗಳ ಎದುರು ಬಂದಿದ್ದಾರೆ. ಹಾಗಂತ ದರ್ಶನ್ ಸುದ್ದಿಯೇ ಇರಲ್ಲ ಅಂತಲ್ಲ. ಯಾವುದಕ್ಕೂ ಅವರು ಉತ್ತರ ಕೊಡಲ್ಲ. ಸೈಲೆಂಟ್. ಹೀಗೇಕೆ.. ಎಂದರೆ ದರ್ಶನ್ ಹೇಳೋದಿಷ್ಟು.
ನಾನೊಬ್ಬ ನಟ. ನಟನೆ ನನ್ನ ವೃತ್ತಿ. ಬೆಳಗ್ಗೆ 9ರಿಂದ ಸಂಜೆ 6ರವರೆಗೆ ನಾನು ಕ್ಯಾಮೆರಾ ಎದುರು ನಟಿಸುತ್ತೇನೆ. ಅದರ ಹೊರತಾಗಿ ನನಗೆ ನನ್ನದೇ ಆದ ಲೈಫ್ ಇದೆ. ಫ್ರೆಂಡ್ಸ್ ಜೊತೆ ಇರುತ್ತೇನೆ. ಚೆನ್ನಾಗಿ ತಿಂತೇನೆ. ಒಳ್ಳೆ ನಿದ್ದೆ ಮಾಡ್ತೇನೆ. ನಟನೆ ನನ್ನ ಜೀವನದ ಒಂದು ಭಾಗ. ಕ್ಯಾಮೆರಾ ಎದುರು ನಟಿಸುವುದು ನನ್ನ ವೃತ್ತಿ. ಅದರ ಹೊರತಾಗಿ ನಾನೂ ಒಬ್ಬ ಮನುಷ್ಯ ಎನ್ನುತ್ತಾರೆ ದರ್ಶನ್.
ಕ್ಯಾಮೆರಾ ಇಲ್ಲದೇ ಇರುವಾಗ ನನಗೆ ನಟಿಸೋಕೆ ಬರಲ್ಲ. ನಾನು ಇರೋದೇ ಹೀಗೆ. ನಾನು ಮಾತನಾಡೋದು ಕಡಿಮೆ. ಹಾಗಂತ, ನಾನು ಯಾರಿಗೂ ಸಿಕ್ಕಲ್ಲ ಎಂದಲ್ಲ. ಅಭಿಮಾನಿಗಳ ಜೊತೆ ಟಚ್‍ನಲ್ಲಿರುತ್ತೇನೆ. ಇನ್ನೊಬ್ಬರ ಎದುರು ಶೋಆಫ್ ಮಾಡೋಕೆ ನನಗೆ ಬರಲ್ಲ ಎಂದಿದ್ದಾರೆ ದರ್ಶನ್.