ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ, ಡಿ.ಕೆ.ರವಿ ಅವರ ಕಥೆಯೆಂದೇ ನಂಬಲಾಗಿದ್ದ, ಅದೇ ವಿಚಾರಕ್ಕೆ ಹೈಕೋರ್ಟ್ ಮೆಟ್ಟಿಲೇರಿ ನಂತರ ರಿಲೀಸ್ ಆಗಿದ್ದ ಸಿನಿಮಾ ಚಂಬಲ್. ಸಿನಿಮಾ ರಿಲೀಸ್ ಆಗಿದೆ. ಹಾಗಾದರೆ, ಕಥೆಯಲ್ಲಿ ಡಿ.ಕೆ.ರವಿ ಇದ್ದಾರಾ..? ಇಲ್ವಾ..? ಕೆಲವೊಂದು ಹೋಲಿಕೆಗಳಂತೂ ಇವೆ.
ಡಿ.ಕೆ.ರವಿ ಜಿಲ್ಲಾಧಿಕಾರಿಯಾಗಿದ್ದವರು. ದೊಡ್ಡ ಹೆಸರು ಮಾಡಿದ್ದು ಕೋಲಾರದಲ್ಲಿ. ನಂತರ ವಾಣಿಜ್ಯ ತೆರಿಗೆ ಇಲಾಖೆಯಲ್ಲೂ ಭ್ರಷ್ಟರಲ್ಲಿ ನಡುಕ ಹುಟ್ಟಿಸಿದ್ದವು. ಅಷ್ಟೇ ನಿಗೂಢವಾಗಿ ಸಾವನ್ನಪ್ಪಿದ್ದರು.
ಚಿತ್ರದಲ್ಲಿ ನೀನಾಸಂ ಸತೀಶ್ ಪಾತ್ರದ ಹೆಸರು ಸುಭಾಶ್. ಆತನೂ ಕೋಲಾರದ ಡಿಸಿಯಾಗಿ, ವಾಣಿಜ್ಯ ತೆರಿಗೆ ಅಧಿಕಾರಿಯಾಗಿರುತ್ತಾನೆ. ಸೇಮ್ ಟು ಸೇಮ್... ನಿಗೂಢವಾಗಿ ಸತ್ತು ಹೋಗುತ್ತಾನೆ ಸುಭಾಶ್. ಅದು ಕೊಲೆನಾ..? ಆತ್ಮಹತ್ಯೆನಾ..?
ಅತ್ಯಂತ ಸಂಯಮದಿಂದ, ಕಥೆಯನ್ನು ಕಥೆಯಾಗಿ ಅಷ್ಟೇ ಹೇಳಿರುವ ಜೇಕಬ್ ವರ್ಗಿಸ್, ಆ ಪ್ರಶ್ನೆಗೆ ಉತ್ತರವನ್ನೂ ಚಿತ್ರದಲ್ಲಿ ಕೊಟ್ಟಿದ್ದಾರೆ.