` ಕೋಡಿ ರಾಮಕೃಷ್ಣ.. ತೆಲುಗಿನಿಂದ ಆರಂಭ.. ಕನ್ನಡದಲ್ಲಿ ಅಂತ್ಯ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kodi ramakrishna's journey began in telugu and ended in kannada films
Kodi Ramakrishna

ಕೋಡಿ ರಾಮಕೃಷ್ಣ. ತೆಲುಗಿನಲ್ಲಿ ಪ್ರಖ್ಯಾತ ಹೆಸರು. ತೆಲುಗು, ತಮಿಳು, ಹಿಂದಿ ಹಾಗೂ ಕನ್ನಡದಲ್ಲೂ ಸಿನಿಮಾ ನಿರ್ದೇಶಿಸಿದ್ದ ಪ್ರತಿಭಾನ್ವಿತ ನಿರ್ದೇಶಕ. 69 ವರ್ಷದ ನಿರ್ದೇಶಕ ನಿರ್ದೇಶಿಸಿದ್ದು 100 ಚಿತ್ರ ನಿರ್ದೇಶಿಸಿದ್ದರು ಎಂದರೆ ಅದೇ ವಂಡರ್.

1982ರಲ್ಲಿ ತೆಲುಗಿನಲ್ಲಿ ಇಂಟ್ಲೋ ರಾಮಯ್ಯ, ವೀಧಿಲೋ ಕೃಷ್ಣಯ್ಯ ಚಿತ್ರದಿಂದ ಆರಂಭವಾದ ಡೈರೆಕ್ಟರ್ ಜರ್ನಿ, ಅಂತ್ಯವಾಗಿದ್ದು ಕನ್ನಡದಲ್ಲಿ. ದಿಗಂತ್, ರಮ್ಯಾ ಅಭಿನಯದ ನಾಗರಹಾವು ಕೋಡಿ ರಾಮಕೃಷ್ಣ ನಿರ್ದೇಶನದ ಕೊನೆಯ ಚಿತ್ರ. ವಿಷ್ಣುವರ್ಧನ್ ಅವರನ್ನು ಗ್ರಾಫಿಕ್ಸ್ ಮೂಲಕ ಮರುಸೃಷ್ಟಿಸಿದ್ದರು ಕೋಡಿ ರಾಮಕೃಷ್ಣ.

ಕೋಡಿ ರಾಮಕೃಷ್ಣ ಅವರಿಂದಾಗಿ ಸ್ಟಾರ್ ಆಗಿದ್ದು ನಟರಿಗಿಂತ ಹೆಚ್ಚಾಗಿ ನಟಿಯರು. ಅಮ್ಮೋರು ಚಿತ್ರದ ಮೂಲಕ ಸೌಂದರ್ಯ, ದೇವಿ ಚಿತ್ರದ ಮೂಲಕ ಪ್ರೇಮ, 

ಅರುಂಧತಿ ಚಿತ್ರದ ಮೂಲಕ ಅನುಷ್ಕಾ ಶೆಟ್ಟಿ ದಕ್ಷಿಣ ಭಾರತದ ಸ್ಟಾರ್‍ಗಳಾದರು. ತೆಲುಗಿನ ಆಲ್‍ಮೋಸ್ಟ್ ಎಲ್ಲ ತಾರೆಗಳಿಗೂ ಸಿನಿಮಾ ಮಾಡಿದ ಖ್ಯಾತಿ ಕೋಡಿ ರಾಮಕೃಷ್ಣ ಅವರದ್ದು.

69ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ನಿಧನರಾದ ಕೋಡಿ ರಾಮಕೃಷ್ಣ ಅವರಿಗೆ ದಕ್ಷಿಣ ಭಾರತ ಚಿತ್ರರಂಗ ಕಂಬನಿ ಮಿಡಿದಿದೆ.

Ayushmanbhava Movie Gallery

Ellidhe Illitanaka Movie Gallery