` ಕಪಿಲ್ ಶೋನಲ್ಲಿ ಕಿಚ್ಚನ ಕನ್ನಡ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kiccha sudeep talks in kannada at kapil sharma show
Sudeep At Kapil Sharma Show

ಕಪಿಲ ಶರ್ಮಾ ಶೋ, ಹಿಂದಿಯ ರಿಯಾಲಿಟಿ ಶೋ. ಕನ್ನಡದ ಮಜಾ ಟಾಕೀಸಿನಂತಹುದೇ ಶೋ. ಆ ಶೋನಲ್ಲಿ ಬಾಲಿವುಡ್ ಸ್ಟಾರ್‍ಗಳು ಬಂದು ನಕ್ಕು ಎಂಜಾಯ್ ಮಾಡ್ತಾರೆ. ಆ ಶೋನಲ್ಲಿ ಕಿಚ್ಚ ಸುದೀಪ್ ಭಾಗವಹಿಸಿದ್ದರು. ದಕ್ಷಿಣ ಭಾರತೀಯ ಚಿತ್ರರಂಗದ ತಾರೆಗಳು ಈ ಶೋನಲ್ಲಿ ಕಾಣಿಸಿಕೊಳ್ಳೋದು ಅಪರೂಪ. ಕನ್ನಡದಲ್ಲಿ ಕಿಚ್ಚ ಸುದೀಪ್ ಮೊದಲಿಗ.

ಹಿಂದಿ ಶೋನಲ್ಲಿಯೂ ಕಿಚ್ಚ ಸುದೀಪ್ ಕನ್ನಡ ಮರೆತಿಲ್ಲ. ಅಷ್ಟೇ ಅಲ್ಲ, ಬಿಗ್ ಬಾಸ್ ಶೋ ನಿರೂಪಕರೂ ಆಗಿರುವ ಸುದೀಪ್, ನಮಸ್ತೆ, ಕಪಿಲ್ ಶರ್ಮಾ ಶೋಗೆ ಸ್ವಾಗತ. ನಾನು ನಿಮ್ಮ ಕಿಚ್ಚ ಸುದೀಪ್, ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದೇನೆ ಎಂದು ಕನ್ನಡದಲ್ಲಿಯೇ ಹೇಳಿದ್ದಾರೆ. ಸ್ವಾಗತಿಸಿದ್ದಾರೆ.

Geetha Movie Gallery

Ombattane Dikku Launch Meet Gallery