` ರವಿಚಂದ್ರನ್ ಮಗಳ ನಿಶ್ಚಿತಾರ್ಥ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ravichandran's daughter's engagement today
Ravichandran

ಕ್ರೇಜಿ ಸ್ಟಾರ್ ರವಿಚಂದ್ರನ್, ಮಾವನಾಗುತ್ತಿದ್ದಾರೆ. ಅವರ ಮನೆಗೀಗ ಅಳಿಯ ಬರುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಚೆಲುವೆ ಒಂದು ಕೇಳ್ತೀನಿ ಎಂದು ಹಾಡಿದಂತಿರುವ ರವಿಚಂದ್ರನ್, ಈಗ ಮದುವೆ ವಯಸ್ಸಿನ ಮಗಳ ತಂದೆ. 

ರವಿಚಂದ್ರನ್ ಅವರ ಮುದ್ದಿನ ಮಗಳು ಗೀತಾಂಜಲಿ ಅವರ ಮದುವೆ ಫಿಕ್ಸ್ ಆಗಿದೆ. ಉದ್ಯಮಿ ಅಜಯ್ ಎಂಬುವವರ ಜೊತೆ ಇಂದು ನಿಶ್ಚಿತಾರ್ಥ ನಡೆಯಲಿದೆ. ಪ್ರೇಮಲೋಕದ ಸರದಾರನ ಮಗಳದ್ದೇನೂ ಪ್ರೇಮ ವಿವಾಹವಲ್ಲ. ಅರೇಂಜ್ಡ್ ಮ್ಯಾರೇಜ್.