ಬೆಲ್‍ಬಾಟಂ ಚಿತ್ರದ ಸಕ್ಸಸ್‍ನಲ್ಲಿ ಮಿಂದೇಳುತ್ತಿರುವ ರಿಷಬ್ ಶೆಟ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯನ್ನೂ ಮರೆತಿಲ್ಲ. ನೀವು ಸ.ಹಿ.ಪ್ರಾ.ಪಾ. ಸಿನಿಮಾ ನೋಡಿದ್ದರೆ, ಚಿತ್ರದಲ್ಲಿ ಬರುವ ಶಾಲೆಯೂ ನೆನಪಿದ್ದೇ ಇರುತ್ತದೆ. ಅದು ಕೈರಂಗಳ ಶಾಲೆ.
ದುಸ್ಥಿತಿಯಲ್ಲಿದ್ದ ಶಾಲೆಗೆ ಏನಾದರೂ ನೆರವು ನೀಡಬೇಕು ಎಂದು ನಿರ್ಧರಿಸಿದ್ದ ರಿಷಬ್ ಶೆಟ್ಟಿ, ಚಿತ್ರ ಹಿಟ್ ಆಗಿ ಲಾಭ ಬಂದ ಮೇಲೆ ಸುಮ್ಮನೆ ಕೂರಲಿಲ್ಲ. ಇಡೀ ಶಾಲೆಯ ಜೀರ್ಣೋದ್ಧಾರಕ್ಕೆ ಕೈ ಹಾಕಿದರು. ಕೆಲಸ ಈಗ ಅಂತಿಮ ಹಂತದಲ್ಲಿದೆ.
ಸಿನಿಮಾದ 125ನೇ ದಿನದ ಸಂಭ್ರಮಾಚರಣೆ ವೇಳೆ ರಿಷಬ್ ಈ ವಿಷಯ ಬಹಿರಂಗಪಡಿಸಿದ್ದಾರೆ.