ಚಂಬಲ್ ಎಂದರೆ ಥಟ್ಟಂತ ನೆನಪಿಗೆ ಬರೋದು ಪೂಲನ್ ದೇವಿ. ಆ ಕಣಿವೆಯ ಡಕಾಯಿತರು. ಚಂಬಲ್ ಕಣಿವೆ ಡಕಾಯಿತಿಗೆ ಫೇಮಸ್. ಅಂತಾದ್ದೊಂದು ಡಕಾಯಿತರೊಂದಿಗೇ ಅಂಟಿಕೊಂಡಿರುವ ಹೆಸರನ್ನು ತಮ್ಮ ಚಿತ್ರದ ಟೈಟಲ್ ಮಾಡಿರುವುದು ಏಕೆ ಅನ್ನೋ ಪ್ರಶ್ನೆ ನೀನಾಸಂ ಸತೀಶ್ ಮತ್ತು ಜೇಕಬ್ ವರ್ಗಿಸ್ ಅವರಿಗೆ ಪದೇ ಪದೇ ಎದುರಾಗಿದೆ.
ಚಂಬಲ್ ಕಣಿವೆಯಲ್ಲಿ ಒಂದೇ ವೇಷದ ಡಕಾಯಿತರಿದ್ದರು. ಆದರೆ, ಇಲ್ಲಿ.. ಈಗ ಹಲವು ವೇಷದ ಡಕಾಯಿತರಿದ್ದಾರೆ. ವೈಟ್ ಕಾಲರ್ ದರೋಡೆಕೋರರು. ಅವರು ನಮ್ಮ ಪಕ್ಕದಲ್ಲೇ ಇದ್ದುಕೊಂಡು, ಎಲ್ಲವನ್ನೂ ಕಬಳಿಸಿಕೊಂಡು, ನಮ್ಮಿಂದಲೇ ಗೌರವ ಪಡೆಯುತ್ತಿದ್ದಾರೆ. ಅಂತಹವರ ಮಧ್ಯೆ ಹುಲಿಯಂತೆ ನುಗ್ಗಿ ಹೋರಾಡುವ ಅಧಿಕಾರಿಯೊಬ್ಬನ ಕಥೆ ಚಂಬಲ್. ಹೀಗಾಗಿಯೇ ಚಿತ್ರಕ್ಕೆ ಚಂಬಲ್ ಅನ್ನೋ ಟೈಟಲ್ ಕೊಟ್ಟೆವು ಎನ್ನುತ್ತಾರೆ ಸತೀಶ್ ಮತ್ತು ವರ್ಗಿಸ್.
ನೀನಾಸಂ ಸತೀಶ್ ಜಿಲ್ಲಾಧಿಕಾರಿಯಾಗಿ, ಸೋನು ಗೌಡ ಸತೀಶ್ ಪತ್ನಿಯಾಗಿ ನಟಿಸಿರುವ ಚಿತ್ರ ಪಕ್ಕಾ ಕ್ರೈಂ ಥ್ರಿಲ್ಲರ್.