` ಸ್ಟ್ರೈಕರ್ ಎಂಬ ವಿಚಿತ್ರ ಕಥೆ ಹೊಳೆದದ್ದು ಹೇಗೆ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
striker director talks about the movie
Pavan Trivikram

ಪವನ್ ತ್ರಿವಿಕ್ರಮ್ ನಿರ್ದೇಶನದ ಸ್ಟ್ರೈಕರ್ ರಿಲೀಸ್ ಆಗುತ್ತಿದೆ. ಚಿತ್ರದ ಕತೆಯೇ ವಿಚಿತ್ರ. ಸುಮ್ಮನೆ ನೋಡಿ.. ಹೀರೋ ಕನಸಿನಲ್ಲಿ ಕಾಣೋದನ್ನು ವಾಸ್ತವ ಎಂದುಕೊಳ್ತಾನೆ. ವಾಸ್ತವದಲ್ಲಿ ನಡೆಯೋದನ್ನು ಕನಸು ಎಂದುಕೊಳ್ತಾನೆ. ನಿದ್ದೆಯಲ್ಲಿದ್ದಾಗ ನಿಜವಾಗಿಯೂ ಎದ್ದಿದ್ದೇನೆ ಎಂದುಕೊಂಡು ಮೂತ್ರ ಮಾಡಿಕೊಳ್ಳುವ ಹುಡುಗನ ಆ ದೃಶ್ಯವೇ ಇಡೀ ಚಿತ್ರದ ಕಥೆಯ ವಿಭಿನ್ನತೆಯ ಪರಿಚಯ ಮಾಡಿಸುತ್ತೆ.

ಇಷ್ಟಕ್ಕೂ ಇಂಥಾದ್ದೊಂದು ಕಥೆ ಹೊಳೆದಿದ್ದು ಹೇಗೆ..? ಸ್ಫೂರ್ತಿ ಏನು.? ಎಂದರೆ ಪವನ್ ತ್ರಿವಿಕ್ರಮ್ ಹೇಳೋದು ಹೀಗೆ. ``ನಿರ್ದೇಶನ ಮಾಡಬೆಕು ಎಂದುಕೊಂಡಾಗ ರೊಮ್ಯಾಂಟಿಕ್ ಲವ್ ಸ್ಟೋರಿ ಮಾಡೋಕೆ ಮನಸ್ಸಾಗಲಿಲ್ಲ. ಆ್ಯಕ್ಷನ್ ಸಿನಿಮಾ ಮಾಡೋಣವೆಂದುಕಂಡರೆ, ಅದಕ್ಕೆ ಬೇಕಾದಷ್ಟು ಬಜೆಟ್ ಇರಲಿಲ್ಲ. ಹೀಗಾಗಿಯೇ ಕ್ರೈಂ ಥ್ರಿಲ್ಲರ್ ಆಯ್ಕೆ ಮಾಡಿಕೊಂಡೆ. ಈ ಕಥೆ ಯಾವ ಕ್ಷಣದಲ್ಲಿ ಹೊಳೆಯಿತು ಗೊತ್ತಿಲ್ಲ. ಕಥೆಯನ್ನು ಬೆಳೆಸುತ್ತಾ ಹೋದಂತೆ, ಅದ್ಭುತ ಸ್ಕ್ರಿಪ್ಟ್ ಆಯ್ತು'' ಅಂಥಾರೆ ಪವನ್.

ಪ್ರವೀಣ್ ತೇಜ, ಶಿಲ್ಪಾ ಮಂಜುನಾಥ್, ಭಜರಂಗಿ ಲೋಕಿ ಪ್ರಧಾನ ಪಾತ್ರದಲ್ಲಿರುವ ಈ ಚಿತ್ರ ಸೈಕಲಾಜಿಕಲ್ ಥ್ರಿಲ್ಲರ್ ಆಗಿದ್ದು, ಕಥೆಯಿಂದಾಗಿಯೇ ಗಮನ ಸೆಳೆಯುತ್ತಿದೆ.

Gara Gallery

Rightbanner02_butterfly_inside

Paddehuli Movie Gallery