ಸಿನಿಮಾ ಎಂದ ಮೇಲೆ ಡೈಲಾಗ್ ಇರಲೇಬೇಕು. ಮಾಸ್ ಹೀರೋ ಎಂದಮೇಲೆ ಅಭಿಮಾನಿಗಳಿಗೆ ಖುಷಿ ಪಡಿಸೋ ಮಾತುಗಳು ಬೇಕೇ ಬೇಕು. ಆದರೆ, ಬೇರೆ ಯಾರ ಸಿನಿಮಾಗಳ ಡೈಲಾಗುಗಳಿಗೂ ಇಲ್ಲದ ಕಾಂಟ್ರವರ್ಸಿ ದರ್ಶನ್ ಸಿನಿಮಾಗಳಿಗೆ ಅಮರಿಕೊಳ್ಳೋದು ಹೊಸದೇನೂ ಅಲ್ಲ.
ದರ್ಶನ್ ಸಿನಿಮಾ ಡೈಲಾಗುಗಳನ್ನೆಲ್ಲ ಸ್ಯಾಂಡಲ್ವುಡ್ನ ಬೇರೆ ಬೇರೆ ಹೀರೋಗಳಿಗೆ ಟಾಂಗ್ ಕೊಟ್ಟಿದ್ದು, ಕೌಂಟರ್ ಕೊಟ್ಟಿದ್ದು ಎಂಬರ್ಥದಲ್ಲಿ ಶುರುವಾಗಿ, ಅದು ದರ್ಶನ್ ಬಗ್ಗೆ ಗಮನಕ್ಕೆ ಬಂದು, ಅದು ಹಾಗಲ್ಲ.. ಹೀಗೆ ಎಂದು ಹೇಳುವ ಹೊತ್ತಿಗೆ ಏನೇನೋ ಆಗಿ ಹೋಗಿರುತ್ತೆ. ಇದಕ್ಕೆಲ್ಲ ಈಗ ದರ್ಶನ್ ಕೇರ್ ತೆಗೆದುಕೊಂಡುಬಿಟ್ಟಿದ್ದಾರೆ.
`ಸಿನಿಮಾ ಶುರುವಾಗುವ ಮೊದಲೇ ಡೈಲಾಗ್ ಬರೆಯೋವ್ರಿಗೆ ಹೇಳಿರ್ತೇನೆ. ಡೈಲಾಗ್ ಬಂದ ಮೇಲೆ ಅವರು ಟಾಂಗ್ ಕೊಟ್ರು, ಕೌಂಟರ್ ಕೊಟ್ರು ಅನ್ನೋ ಡೈಲಾಗ್ ಬರಬಾರದು. ಹಾಗೇನಾದ್ರೂ ಬಂದ್ರೆ, ನಾನು ನಿಮ್ಮನ್ನೇ ಕೇಳೋದು' ಎಂದು ಡೈಲಾಗ್ದ ಬರೆಯೋವ್ರಿಗೆ ಹೇಳಿರ್ತಾರಂತೆ ದರ್ಶನ್.
ನಾವು ಕೂಡಾ ಬ್ಯುಸಿ ಇರ್ತೀವಿ. ಎಲ್ಲರ ಎಲ್ಲ ಸಿನಿಮಾಗಳನ್ನೂ ನೋಡೋಕಾಗಲ್ಲ. ನಿಜಕ್ಕೂ ನಮಗೆ ಏನೂ ಗೊತ್ತಿರಲ್ಲ. ಡೈಲಾಗ್ ರೈಟರ್ ಕೊಟ್ಟಿದ್ದನ್ನ ತೆರೆ ಮೇಲೆ ಹೇಳ್ತೀವಿ ಅನ್ನೋ ದರ್ಶನ್, ಈಗ ಯಜಮಾನ ಚಿತ್ರದ ಬಿಡುಗಡೆ ಸಂಭ್ರಮದಲ್ಲಿದ್ದಾರೆ.
ದರ್ಶನ್ ವೃತ್ತಿ ಜೀವನದಲ್ಲಿಯೇ ಸುದೀರ್ಘ ವಿರಾಮದ ನಂತರ, ಬರಗಾಲದ ನಂತರ ತೆರೆಗೆ ಬರುತ್ತಿರುವ ಚಿತ್ರ ಯಜಮಾನ.