` ಚಾಲೆಂಜಿಂಗ್ ಸ್ಟಾರ್ ಫೋಟೋಗ್ರಾಫರ್ ಬನ್ ಗಯಾ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan's wildlife photo exhibition in mysore
Darshan's WildLife Photo Exhibition

ಚಾಲೆಂಜಿಂಗ್ ಸ್ಟಾರ್ ಕೈಯ್ಯಲ್ಲಿ ವಿಲನ್‍ಗಳು ಪುಡಿಪುಡಿಯಾಗೋದನ್ನ ಸಿನಿಮಾಗಳಲ್ಲಿ ನೋಡಿದವರಿಗೆ  ಇದು ಹೊಸತೆಂದರೆ ಹೊಸ ಸುದ್ದಿ. ದರ್ಶನ್ ಈಗ ವೈಲ್ಡ್‍ಲೈಫ್ ಫೋಟೋಗ್ರಾಫರ್ ಆಗಿದ್ದಾರೆ. ಪ್ರಾಣಿಗಳೆಂದರೆ, ಪ್ರಾಣ ಬಿಡುವಷ್ಟು ಪ್ರೀತಿಸುವ ದರ್ಶನ್, ಈಗ ಪ್ರಾಣಿ, ಪಕ್ಷಿಗಳನ್ನು ಶೂಟ್ ಮಾಡಿದ್ದಾರೆ. ಕ್ಯಾಮೆರಾದಲ್ಲಿ. ಅಷ್ಟೇ ಅಲ್ಲ, ಅವೆಲ್ಲ ಫೋಟೋಗಳನ್ನೂ ಇಟ್ಟುಕೊಂಡು ಒಂದು ಎಕ್ಸಿಬಿಷನ್ ಕೂಡಾ ಅಯೋಜಿಸಿದ್ದಾರೆ. ಮೈಸೂರಿನಲ್ಲಿ.

ಮೈಸೂರು ಮೃಗಾಲಯದ ರಾಯಭಾರಿಯೂ ಆಗಿರುವ ದರ್ಶನ್, ಆಗಾಗ್ಗೆ ಬಂಡೀಪುರ ಸೇರಿದಂತೆ ಅಭಯಾರಣ್ಯಕ್ಕೆ ಹೋಗುವುದು, ಸಫಾರಿ ಮಾಡುವುದು ಗೊತ್ತಿದೆ ತಾನೇ. ಆಗೆಲ್ಲ ದರ್ಶನ್ ಕ್ಯಾಮೆರಾ ಹಿಡಿದುಕೊಂಡು 6000ಕ್ಕೂ ಹೆಚ್ಚು ಫೋಟೋ ತೆಗೆದಿದ್ದಾರೆ. ಅವುಗಳಲ್ಲೇ ಕೆಲವನ್ನು ಆಯ್ದು, ಈಗ ಫೋಟೋ ಎಕ್ಸಿಬಿಷನ್ ಮಾಡುತ್ತಿದ್ದಾರೆ.

ಮೈಸೂರಿನ ಸಂದೇಶ್ ನಾಗರಾಜ್ ಅವರ ಸಂದೇಶ್ ಪ್ರಿನ್ಸ್‍ನಲ್ಲಿಯೇ ಫೋಟೋ ಎಕ್ಸಿಬಿಷನ್ ಆಯೋಜಿಸಲಾಗಿದೆ. ಮಾರ್ಚ್ 1ರಿಂದ 3 ದಿನ ನಡೆಯುವ ಈ ಫೋಟೋ ಎಕ್ಸಿಬಿಷನ್‍ಗೆ ನೀವೂ ಹೋಗಬಹುದು. 

ಫೋಟೋ ಇಷ್ಟವಾಗಿ ಖರೀದಿಸಿದ್ರೆ, 2000 ರೂ. ಜೊತೆಗೆ ದರ್ಶನ್ ಆಟೋಗ್ರಾಫ್ ಕೂಡಾ ಬೇಕು ಎಂದರೆ, 2,500 ರೂ. ಅಷ್ಟೆ. 

ಒನ್ಸ್ ಎಗೇಯ್ನ್, ಈ ಹಣವೂ ದರ್ಶನ್ ಜೇಬಿಗೆ ಹೋಗಲ್ಲ. ವನ್ಯಜೀವಿ ಅರಣ್ಯ ಸಂರಕ್ಷಣಾ ನಿಧಿಗೆ ಈ ಫೋಟೋ ಎಕ್ಸಿಬಿಷನ್ ಹಣ ಸಂದಾಯವಾಗಲಿದೆ.

Related Articles :-

Challenging ‘Wildlife’ Photography On Display

Gara Gallery

Rightbanner02_butterfly_inside

Paddehuli Movie Gallery