ಚಂಬಲ್, ಡಿ.ಕೆ.ರವಿ ಅವರ ಬಯೋಪಿಕ್ ಅಂತೆ.. ಎನ್ನುವ ಕಾರಣಕ್ಕೇ ವಿಚಿತ್ರ ಕುತೂಹಲ ಹುಟ್ಟಿಸಿರುವ ಸಿನಿಮಾ. ಜೊತೆಗೆ ಚಿತ್ರದ ಮೇಕಿಂಗ್ ಕೂಡಾ ಗಮನ ಸೆಳೆಯುತ್ತಿದೆ. ಅಂದಹಾಗೆ ಚಿತ್ರದ ನಿರ್ದೇಶಕ ಜೇಕಬ್ ವರ್ಗಿಸ್.
ಹಲವು ವರ್ಷಗಳ ಹಿಂದೆ, ಜೇಕಬ್ `ಪೃಥ್ವಿ' ಸಿನಿಮಾ ಮಾಡಿದ್ದರು. ಗಣಿಗಾರಿಕೆಯ ವಿರುದ್ಧ ಹೋರಾಡುವ ಜಿಲ್ಲಾಧಿಕಾರಿಯಾಗಿ ನಟಿಸಿದ್ದವರು ಪುನೀತ್ ರಾಜ್‍ಕುಮಾರ್. ಆಗ, ರೆಡ್ಡಿಗಳು ಮೆರೆಯುತ್ತಿದ್ದ ಕಾಲ. ಸ್ವತಃ ದೇವೇಗೌಡರೇ ನೋಡಿ ಮೆಚ್ಚಿಕೊಂಡಿದ್ದ ಚಿತ್ರವದು.
ಈಗ ಮತ್ತೊಮ್ಮೆ ಜಿಲ್ಲಾಧಿಕಾರಿ ಕಥೆ ಕೈಗೆತ್ತಿಕೊಂಡಿರುವ ಜೇಕಬ್ ವರ್ಗಿಸ್, ನೀನಾಸಂ ಸತೀಶ್ ಅವರನ್ನು ಜಿಲ್ಲಾಧಿಕಾರಿ ಮಾಡಿದ್ದಾರೆ. ಇದೇ ವಾರ ತೆರೆಗೆ ಬರುತ್ತಿರುವ ಚಂಬಲ್, ಕುತೂಹಲ ಹೆಚ್ಚುತ್ತಲೇ ಹೋಗುತ್ತಿದೆ.