ಚಂಬಲ್ ಚಿತ್ರದ ನಾಯಕಿ ಸೋನು ಗೌಡ. ಜೇಕಬ್ ವರ್ಗಿಸ್ ಅವರ ಹೆಸರು ಕೇಳಿಯೇ ಒಪ್ಪಿಕೊಂಡಿದ್ದ ಈ ಚೆಲುವೆಗೆ ನಿರ್ದೇಶಕರು ಸೆಟ್‍ಗೆ ಹೋದಾಗ ದೊಡ್ಡ ಶಾಕ್ ಕೊಟ್ಟಿದ್ದರಂತೆ. ಹೀರೋಯಿನ್ ಎಂದ ಮೇಲೆ ಗ್ಲಾಮರ್ ಇರುತ್ತಲ್ವಾ..? ಆದರೆ, ಸೆಟ್ಟಿಗೆ ಹೋದವರಿಗೆ ಗ್ಲಾಮರ್ ಟಚ್ ಇರಲಿ, ನಾರ್ಮಲ್ ಮೇಕಪ್ಪನ್ನು ಕೂಡಾ ತೆಗೆಸಿದ್ದರಂತೆ ನಿರ್ದೇಶಕ ಜೇಕಬ್.
ಅಫ್‍ಕೋರ್ಸ್, ಸೋನು ಗೌಡ ಮೇಕಪ್ ಇಲ್ಲದೆಯೂ ಸುಂದರಿಯೇನೋ ನಿಜ. ನೀನಾಸಂ ಸತೀಶ್ ಎದುರು ಚಿತ್ರದಲ್ಲಿ ಅವರು ಪತ್ನಿಯಾಗಿ ನಟಿಸಿದ್ದಾರೆ.