` ಚಿತ್ರರಂಗಕ್ಕೆ ಅವರೊಬ್ಬರೇ ಯಜಮಾನ.. ನನಗೆ ಅಂಬರೀಷಣ್ಣ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
he is the one and only yajamana and will remain the same
Darshan Image from yajamana Pressmeet

ಚಿತ್ರರಂಗಕ್ಕೆ ಆವತ್ತು.. ಇವತ್ತು.. ಮುಂದೆ.. ಯಾವತ್ತಿಗೂ ಅಷ್ಟೆ. ವಿಷ್ಣುವರ್ಧನ್ ಒಬ್ಬರೇ ಯಜಮಾನ. ಇದು ದರ್ಶನ್ ಅವರ ಖಡಕ್ ಮಾತು. 

ಯಜಮಾನ ಚಿತ್ರದ ಟೈಟಲ್ ಕುರಿತು ಕೇಳಿ ಬರುವ ಮಾತುಗಳಿಗೆ ಉತ್ತರ ಕೊಟ್ಟಿರೋ ದರ್ಶನ್, ಚಿತ್ರದ ಕಥೆಗೆ ಯಜಮಾನ ಟೈಟಲ್ ಸೂಕ್ತವಾಗಿದೆ. ಹಾಗಾಗಿ ಇಟ್ಟಿದ್ದೇವೆ. ಕಥೆಗಾಗಿ ಯಜಮಾನ ಟೈಟಲ್ ಹೊರತೂ, ದರ್ಶನ್‍ಗಾಗಿ ಯಜಮಾನ ಅಲ್ಲ ಎಂದಿದ್ದಾರೆ ದರ್ಶನ್.

ಇಷ್ಟೆಲ್ಲ ಆದ ಮೇಲೆ ನಿಮ್ಮ ಯಜಮಾನ ಯಾರು ಎಂದರೆ, ಅಷ್ಟೇ ನೇರ ಉತ್ತರ ದರ್ಶನ್ ಅವರದ್ದು. ದರ್ಶನ್ ಪಾಲಿಗೆ ಯಾವತ್ತಿದ್ರೂ ಅಂಬರೀಷ್ ಅವರೇ ಯಜಮಾನ.