ಇದೇ ವಾರ ತೆರೆಗೆ ಬರುತ್ತಿರುವ ಸ್ಟ್ರೈಕರ್ ಚಿತ್ರದ ನಾಯಕಿ ಶಿಲ್ಪಾ ಮಂಜುನಾಥ್. ಮುಂಗಾರು ಮಳೆ 2 ಚಿತ್ರದಲ್ಲಿ ನಟಿಸಿದ್ದ ಈ ಚೆಲುವೆ, ನಂತರ ಮುಗುಳುನಗೆಯಲ್ಲೂ ಗಮನ ಸೆಳೆದಿದ್ದರು. ಈಗ ಸ್ಟ್ರೈಕರ್ ಚಿತ್ರದ ನಾಯಕಿ.
ಸ್ಟ್ರೈಕರ್ನಲ್ಲಿ ಶಿಲ್ಪಾ ಅನಾಥ ಹುಡುಗಿ. ಆಕೆಗೆ ಅವಳ ಸ್ನೇಹಿತೆಯರೇ ಗಂಡು ಹುಡುಕಿ ಮದುವೆ ಮಾಡ್ತಾರೆ. ಮದುವೆಯಾಗೋದು ತಾನು ಬದುಕುತ್ತಿರುವುದು ಕನಸಿನಲ್ಲೋ.. ವಾಸ್ತವದಲ್ಲೋ ಎಂದು ತಿಳಿಯದೆ ಒದ್ದಾಡುತ್ತಿರುವ ಪ್ರವೀಣ್ ತೇಜ್ ಜೊತೆ. ಸೈಕಲಾಜಿಕಲ್ ಥ್ರಿಲ್ಲರ್ ಜಾನರ್ ಇಷ್ಟವಾಯ್ತು ಎನ್ನುವ ಶಿಲ್ಪಾ ಮಂಜುನಾಥ್, ಕ್ರೀಡಾಪಟುವೂ ಹೌದು.
ಇಷ್ಟೆಲ್ಲ ಆಗಿ ಸಿನಿಮಾದಲ್ಲಿ ನಟಿಸೋಕೆ ಪ್ರತಿಭೆ ಮುಖ್ಯನಾ..? ಸೌಂದರ್ಯ ಮುಖ್ಯಾನಾ..? ಎಂಬ ಪ್ರಶ್ನೆಯನ್ನು ಶಿಲ್ಪಾ ಮುಂದಿಟ್ಟರೆ ಅವರು ಮೊದಲ ರ್ಯಾಂಕ್ ಕೊಡೋದು ಪ್ರತಿಭೆಗೆ. ನಾನು ನಂಬಿರೋದು ಕೂಡಾ ಪ್ರತಿಭೆಯನ್ನೇ ಎನ್ನುವ ಶಿಲ್ಪಾ, ಸ್ಟ್ರೈಕರ್ ಚಿತ್ರದ ಮೇಲೆ ಭರವಸೆ ಇಟ್ಟಿದ್ದಾರೆ.