` ದರ್ಶನ್ ಚಿತ್ರಕ್ಕೆ ಮಹಾನಟಿ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
will keerthi suresh act opposite darshan in next movie
Keerthi Suresh, Darshan

ಮಹಾನಟಿ ಎಂದರೆ ತಕ್ಷಣ ನೆನಪಿಗೆ ಬರುವುದು ತೆಲುಗು, ತಮಿಳು ಚಿತ್ರರಂಗದಲ್ಲಿ ಬ್ಲಾಕ್ & ವೈಟ್ ಯುಗದಲ್ಲಿ ಚಿತ್ರರಂಗವನ್ನು ಆಳಿ, ಅರಸಿಯಂತೆ ಬಾಳಿ, ದುರಂತ ಅಂತ್ಯ ಕಂಡ ಸಾವಿತ್ರಿ. ಆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಗೆದ್ದಿದ್ದರು ಕೀರ್ತಿ ಸುರೇಶ್. ಈಗ ಕೀರ್ತಿ ಸುರೇಶ್, ದರ್ಶನ್ ಅವರಿಗೆ ಜೋಡಿಯಾದರೆ ಹೇಗೆ ಎಂಬ ಚರ್ಚೆ ಶುರುವಾಗಿದೆ.

ದರ್ಶನ್ ಅಭಿನಯದ ಗಂಡುಗಲಿ ಮದಕರಿ ನಾಯಕ ಚಿತ್ರಕ್ಕೆ ನಾಯಕಿಯಾಗಿ ಕೀರ್ತಿ ಸುರೇಶ್ ಅವರನ್ನು ಆಯ್ಕೆ ಮಾಡಿಕೊಂಡರೆ ಹೇಗೆ ಎಂಬ ಬಗ್ಗೆ ಚಿಂತನೆಗಳಂತೂ ಶುರುವಾಗಿದೆ. 

ಬೇಕೇ ಬೇಕು ಎಂದು ಚಿತ್ರತಂಡ ಕೇಳಿಕೊಂಡರೆ, ಕರೆದುತರುವುದು ರಾಕ್‍ಲೈನ್ ವೆಂಕಟೇಶ್‍ಗೆ ಕಷ್ಟವೇನಲ್ಲ. ಜಸ್ಟ್ ವೇಯ್ಟ್.

Matthe Udbhava Trailer Launch Gallery

Maya Bazaar Pressmeet Gallery