ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರೋ ಬೆಲ್‍ಬಾಟಂ ಸಿನಿಮಾ, ಈಗ ಫಾರಿನ್ ಟೂರ್ ಹೊರಟಿದೆ. ಫೆಬ್ರವರಿ 22ರಿಂದ ಅಮೆರಿಕ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಸೇರಿದಂತೆ ಹಲವು ಕಡೆ ಬಿಡುಗಡೆಯಾಗುತ್ತಿದೆ. ಕಿರಿಕ್ ಪಾರ್ಟಿ,ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚಿತ್ರಗಳ ಮೂಲಕ, ವಿದೇಶದಲ್ಲಿಯೂ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರೋ ರಿಷಬ್ ಶೆಟ್ಟಿಗೆ, ಬೆಲ್‍ಬಾಟಂ ಮೇಲೆ ಹೊಸದೇ ನಿರೀಕ್ಷೆ ಇದೆ.
ಸ್ಯಾಂಡಲ್‍ವುಡ್ ಗೆಳೆಯರ ಬಳಗ ಅಮೆರಿಕದ 30ಕ್ಕೂ ಹೆಚ್ಚು ಸೆಂಟರ್‍ಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಇತ್ತ, ರಾಜ್ಯದ ಹಲವು ಕಡೆ ಥಿಯೇಟರುಗಳ ಸಂಖ್ಯೆ ಹೆಚ್ಚುತ್ತಿದೆ. ಮಲ್ಟಿಪ್ಲೆಕ್ಸುಗಳಲ್ಲಿ ಶೋಗಳ ಸಂಖ್ಯೆಯೂ ಹೆಚ್ಚುತ್ತಿದೆ.
ರಿಷಬ್ ಶೆಟ್ಟಿಗೆ ಹರಿಪ್ರಿಯಾ ಜೋಡಿಯಾಗಿದ್ದು, ಜಯತೀರ್ಥ ನಿರ್ದೇಶನ ಮಾಡಿದ್ದಾರೆ.