2013.. ನೀನಾಸಂ ಸತೀಶ್ ಪಾಲಿಗೆ ಅದೃಷ್ಟದ ವರ್ಷ. ಸತೀಶ್ ನಾಯಕರಾಗಿದ್ದು ಅದೇ ವರ್ಷ. ಲೂಸಿಯಾ ಚಿತ್ರದ ಮೂಲಕ ಮನೆ ಮಾತಾದವರು ನೀನಾಸಂ ಸತೀಶ್.
2018.. ಸತೀಶ್ ಪಾಲಿಗೆ ಮತ್ತೊಂದು ಮಹತ್ವದ ವರ್ಷ. ಅವರ ಚಂಬಲ್ ಸಿನಿಮಾ ಬಿಡುಗಡೆಯಾಗುತ್ತಿದೆ. ಅಯೋಗ್ಯ ಚಿತ್ರದ ಸೂಪರ್ ಸಕ್ಸಸ್ ಗುಂಗಿನಲ್ಲಿರುವ ಸತೀಶ್‍ಗೆ ಚಂಬಲ್ ಮಹತ್ವದ ಸಿನಿಮಾ. ಇಲ್ಲಿಯೇ ಅವರನ್ನು ಅದೃಷ್ಟದೇವತೆ ಕಾಯುತ್ತಿರುವುದು.
2013ರಲ್ಲಿ ಲೂಸಿಯಾ ರಿಲೀಸ್ ಆಗಿದ್ದ ಅದೇ ಮೂವಿಲ್ಯಾಂಡ್ ಥಿಯೇಟರಿನಲ್ಲಿ ಚಂಬಲ್ ತೆರೆ ಕಾಣುತ್ತಿದೆ. ಲೂಸಿಯಾ, ಮೂವಿಲ್ಯಾಂಡ್‍ನಲ್ಲಿ 70 ದಿನ ಯಶಸ್ವಿ ಪ್ರದರ್ಶನ ಕಂಡಿತ್ತು. ಈ ಬಾರಿ ಚಂಬಲ್, 100 ದಿನ ಪ್ರದರ್ಶನ ಕಾಣಲಿ ಅನ್ನೋದು ಅಭಿಮಾನಿಗಳ ಹಾರೈಕೆ.
ಚಂಬಲ್, ಇದೇ ವಾರ ರಾಜ್ಯದಾದ್ಯಂತ 200ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಪ್ರದರ್ಶನ ಕಾಣಲಿದೆ.
Related Articles :-