ದರ್ಶನ್ ಅಭಿನಯದ 55ನೇ ಸಿನಿಮಾದ ನಿರ್ಮಾಪಕರು ಯಾರು..? ಮೆಜೆಸ್ಟಿಕ್ ರಾಮಮೂರ್ತಿನಾ..? ತಾರಕ್ ಪ್ರಕಾಶ್ ಅವರಾ..? ಈ ಗೊಂದಲಕ್ಕೀಗ ತೆರೆ ಬಿದ್ದಿದೆ. ಡಿ 55 ಚಿತ್ರದ ನಿರ್ಮಾಪಕ ಮೆಜೆಸ್ಟಿಕ್ ರಾಮಮೂರ್ತಿ.
ದರ್ಶನ್ ಅವರನ್ನು ಕೇಳಿಕೊಂಡೇ ಡೇಟ್ ಫಿಕ್ಸ್ ಮಾಡಿದ್ದೇನೆ. ಸದ್ಯಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ನಿರ್ದೇಶಕ, ತಾರಾಗಣ, ತಂತ್ರಜ್ಞರ ಆಯ್ಕೆಯೂ ಆಗಿಲ್ಲ. ಎರಡ್ಮೂರು ಕಥೆಗಳಿವೆ. ದರ್ಶನ್ ಮ್ಯಾನರಿಸಂ, ಇಮೇಜ್‍ಗೆ ಅನುಗುಣವಾದ ಕಥೆ ಸಿದ್ಧವಾಗುತ್ತಿದೆ ಎನ್ನುವುದು ರಾಮಮೂರ್ತಿ ಮಾತು.
ಇತ್ತ ದರ್ಶನ್‍ಗೆ ತಾರಕ್ ಸಿನಿಮಾ ಮಾಡಿದ್ದ ದುಶ್ಯಂತ್, ``ಐವತ್ತೈದೋ.. ಐವತ್ತಾರೋ.. ಯಾವುದೇ ಆಗಲಿ, ನಂಬರ್ ಮುಖ್ಯ ಅಲ್ಲ. ಸಿನಿಮಾ ಮಾಡೋದು ಮುಖ್ಯ. ದರ್ಶನ್ ಕಾಲ್‍ಶೀಟ್ ಕೊಟ್ಟಿದ್ದಾರೆ. ತಾರಕ್ ನಿರ್ದೇಶಿಸಿದ್ದ ಮಿಲನ ಪ್ರಕಾಶ್ ಅವರೇ ಡೈರೆಕ್ಷನ್ ಮಾಡ್ತಾರೆ. ಸೆಪ್ಟೆಂಬರ್ ಅಥವಾ ನವೆಂಬರ್‍ನಲ್ಲಿ ಸಿನಿಮಾ ಶುರುವಾಗಲಿದೆ'' ಅಂತಾರೆ.