ಚಂಬಲ್ ಚಿತ್ರದ ನಾಯಕ ನೀನಾಸಂ ಸತೀಶ್. ನಾಯಕಿ ಸೋನು ಗೌಡ. ಸತೀಶ್ ಜಿಲ್ಲಾಧಿಕಾರಿ ಪಾತ್ರದಲ್ಲಿ ನಟಿಸಿದ್ದರೆ, ಸೋನು ಗೌಡ ಡಿಸಿಯ ಪತ್ನಿ ಸುಮ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.
`ನನ್ನದು ಸುಮ ಎಂಬ ಪಾತ್ರ. ಮುಗ್ದ ಹುಡುಗಿ. ಗಂಡ, ಮನೆಯೇ ಅವಳ ಪ್ರಪಂಚ. ಸೀರೆ, ಕುರ್ತಾದಲ್ಲಿಯೇ ಕಾಣಿಸಿಕೊಳ್ಳುವ, ಗಂಡನ ಪ್ರತಿಯೊಂದು ಕೆಲಸಕ್ಕೂ ಬೆನ್ನೆಲುಬಾಗಿ ನಿಲ್ಲುವ ಪಾತ್ರ' ಎಂದಿದ್ದಾರೆ ಸೋನುಗೌಡ.
ಆದರೆ, ಅವರು ಸಿನಿಮಾಗೆ ಓಕೆ ಎನ್ನುವದಕ್ಕೂ ಮೊದಲು ನಿರ್ದೇಶಕರ ಬಳಿ ಕಥೆಯನ್ನೇ ಕೇಳಲಿಲ್ಲವಂತೆ. ಏಕೆಂದರೆ, ಅವರಿಗೆ ಜೇಕಬ್ ವರ್ಗಿಸ್ ಅವರ ಹಿಂದಿನ ಸಿನಿಮಾಗಳು ಗೊತ್ತಿತ್ತು. ಅವರು ಕಥೆ ಹೇಳುವ ಶೈಲಿಯೂ ಗೊತ್ತಿತ್ತು. ಕೇವಲ ಅದೊಂದು ನಂಬಿಕೆಯಿಂದ ಚಿತ್ರಕ್ಕೆ ಯೆಸ್ ಎಂದೆ. ನಾನೇ ಚಿತ್ರದ ನಾಯಕಿ ಎನ್ನುವುದು ನನಗೆ ಗೊತ್ತಾಗಿದ್ದು ಸೆಟ್‍ಗೆ ಹೋದ ಮೇಲೆ ಎಂದಿದ್ದಾರೆ ಸೋನು ಗೌಡ.