` ಯಜಮಾನ ನಿರ್ದೇಶಕ ಹರಿಕೃಷ್ಣಗೆ ಸ್ಫೂರ್ತಿ ತುಂಬಿದವರೇ ಇವರು..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
harikrishna's major support in film industry
Harikrishna V

ಹರಿಕೃಷ್ಣ ಮತ್ತು ದರ್ಶನ್ ಅವರ ಕಾಂಬಿನೇಷನ್ ಚಿತ್ರರಂಗದಲ್ಲಿ ಹಲವರಿಗೆ ಹಂಸಲೇಖ-ರವಿಚಂದ್ರನ್ ಜೋಡಿ ನೆನಪಿಸುತ್ತೆ. ಹರಿಕೃಷ್ಣ-ದರ್ಶನ್ ಕಾಂಬಿನೇಷನ್ 25 ಸಿನಿಮಾ ಪೂರೈಸಿದೆ.

ಇದಕ್ಕೆಲ್ಲ ಏನು ಕಾರಣ ಎಂದು ನೋಡಿದ್ರೆ ಸ್ಫೂರ್ತಿ ತುಂಬಿದವರ ದೊಡ್ಡ ಪಟ್ಟಿಯನ್ನೇ ಹೇಳ್ತಾರೆ ಹರಿಕೃಷ್ಣ.ಹರಿಕೃಷ್ಣ ಅವರಿಗೆ ಎಡಿಟಿಂಗ್ ಗೊತ್ತು. ಅದನ್ನು ಅವರು ಕಲಿತಿದ್ದು ಟೈಗರ್ ಪ್ರಭಾಕರ್ ಅವರ ಬಳಿ. 

ಹರಿಕೃಷ್ಣ ಅವರು ನಂತರ ಕೆಲ ಕಾಲ ಕೆಲಸ ಮಾಡಿದ್ದು ಸಾಧುಕೋಕಿಲ ಅವರ ಬಳಿ. ಅವರೋ ಸಕಲಕಲಾವಲ್ಲಭ. ಅದಾದ ಮೇಲೆ ಹರಿಕೃಷ್ಣ ಹಂಸಲೇಖ ಅವರ ಶಿಷ್ಯರಾದರು. ಹಂಸಲೇಖ ನಾದಬ್ರಹ್ಮ ಅಷ್ಟೇ ಅಲ್ಲ, ಚಿತ್ರಬ್ರಹ್ಮರೂ ಹೌದು.

ಹಂಸಲೇಖ ಶಿಷ್ಯವೃತ್ತಿ ಮುಗಿದ ಮೇಲೆ ಹರಿಕೃಷ್ಣ ಸುದೀರ್ಘ ಅವಧಿಯವರೆಗೆ ಕೆಲಸ ಮಾಡಿದ್ದು ವಿ.ರವಿಚಂದ್ರನ್ ಅವರ ಬಳಿ. ಅವರೋ.. ಚಿತ್ರರಂಗದ ಯುನಿವರ್ಸಿಟಿಯಿದ್ದಂತೆ.

ಹೀಗೆ ಎಲ್ಲರೊಳಗೊಂದು ನುಡಿ ಕಲಿತು ಸರ್ವಜ್ಞನಾದಂತೆ, ಹರಿಕೃಷ್ಣ ಸಂಗೀತ ನಿರ್ದೇಶಕ, ಗಾಯಕ, ನಿರ್ಮಾಪಕರಾಗಿ ಈಗ ನಿರ್ದೇಶಕರೂ ಆಗಿದ್ದಾರೆ. ಹರಿಕೃಷ್ಣ ನಿರ್ದೇಶನದ ಚೊಚ್ಚಲ ಚಿತ್ರ ಯಜಮಾನ ರಿಲೀಸ್ ಆಗೋಕೆ ರೆಡಿಯಾಗಿದೆ. ಅದು ಒನ್ಸ್ ಎಗೇಯ್ನ್ ದರ್ಶನ್-ಹರಿಕೃಷ್ಣ ಕಾಂಬಿನೇಷನ್ ಸಿನಿಮಾ. ಶೈಲಜಾ ನಾಗ್ ಮತ್ತು ಸ್ವತಃ ನಿರ್ದೇಶಕರಾದ ಬಿ.ಸುರೇಶ ಚಿತ್ರದ ನಿರ್ಮಾಪಕರು.

Londonalli Lambodara Movie Gallery

Rightbanner02_butterfly_inside

Panchatantra Movie Gallery