ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆಲ್‍ಬಾಟಂ ಚಿತ್ರತಂಡ ಹುತಾತ್ಮ ಯೋಧ ಗುರು ಕುಟುಂಬದ ನೆರವಿಗೆ ಧಾವಿಸಿದೆ. ಗುರು ಕುಟುಂಬಕ್ಕೆ ರಿಷಬ್ ಶೆಟ್ಟಿ 50 ಸಾವಿರ ರೂ. ಹಾಗೂ ನಿರ್ಮಾಪಕ ಸಂತೋಷ್ 25 ಸಾವಿರ ರೂ. ಪರಿಹಾರನೀಡಿ ಸಾಂತ್ವನ ಹೇಳಿದ್ದಾರೆ.
ನಾವು ನೀಡುವ ಹಣ, ಗುರು ಕುಟುಂಬದ ತ್ಯಾಗಕ್ಕೆ ಯಾವ ರೀತಿಯಲ್ಲೂ ಸಮನಲ್ಲ ಎಂದಿರುವ ರಿಷಬ್ ಶೆಟ್ಟಿ, ಇಂತಹ ವೇಳೆಯಲ್ಲೂ ಪಾಕ್ ಪರ ಘೋಷಣೆ ಕೂಗುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಂದೆಯನ್ನು ಕಳೆದುಕೊಂಡವರ ನೋವು, ನನಗೆ ಅರ್ಥವಾಗುತ್ತೆ ಎಂದಿರುವ ಹರಿಪ್ರಿಯಾ ಕೂಡಾ ಪಾಕ್ ಪರ ಘೋಷಣೆ ಕೂಗುವವರು ದೇಶದಲ್ಲಿರಲು ಅರ್ಹತೆ ಹೊಂದಿಲ್ಲ ಎಂದಿದ್ದಾರೆ ಹರಿಪ್ರಿಯಾ.