` ಓಲ್ಡ್ ಈಸ್ ಗೋಲ್ಡ್.. ಶಾನ್ವಿ ಈಸ್ ಬೋಲ್ಡ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
shanvi srivatsav in retro look for geetha
Shanvi Srivatsav

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರದ ಚಿತ್ರೀಕರಣ ಬಿರುಸಾಗಿ ನಡೆಯುತ್ತಿದೆ. ಈ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ನಾಯಕಿ. ಇದರಲ್ಲಿ ಅವರದ್ದು ರೆಟ್ರೋ ಲುಕ್. ಅರ್ಥಾತ್ 80ರ ದಶಕದ ಚೆಲುವೆ. ಅವನೇ ಶ್ರೀಮನ್ನಾರಾಯಣದಲ್ಲೂ ರೆಟ್ರೋ ಲುಕ್ಕಿನಲ್ಲೇ ಮಿಂಚುತ್ತಿರುವ ಶಾನ್ವಿ, ಗೀತಾ ಚಿತ್ರದಲ್ಲಿ ಬೋಲ್ಡ್ & ಬ್ಯೂಟಿಫುಲ್ ಹುಡುಗಿಯಾಗಿ ನಟಿಸುತ್ತಿದ್ದಾರೆ.

ಕಣ್ಣುಗಳಿಗೆ ದಪ್ಪ ಕಾಡಿಗೆ, ಆ ಕೇಶ ವಿನ್ಯಾಸ, ಹುಬ್ಬುಗಳ ವಿನ್ಯಾಸ ಬಹಳ ಇಷ್ಟವಾಯ್ತು ಎಂದು ಖುಷಿ ಹಂಚಿಕೊಂಡಿದ್ದಾರೆ ಶಾನ್ವಿ. ವಿಜಯ್ ನಾಗೇಂದ್ರ ನಿರ್ದೇಶನದ ಚಿತ್ರದಲ್ಲಿ ಶಾನ್ವಿಯವರೊಂದಿಗೆ ಪ್ರಯಾಗಾ ಮಾರ್ಟಿನ್ ಮತ್ತು ಪಾರ್ವತಿ ಕೂಡಾ ನಾಯಕಿಯರು. ಒಟ್ಟಿನಲ್ಲಿ ಗಣೇಶ್‍ಗೆ ಮುಗುಳುನಗೆ ನಂತರ ಈ ಚಿತ್ರದಲ್ಲೂ ಮೂರು ಮೂರು ಹೀರೋಯಿನ್ ಭಾಗ್ಯ.

Gara Gallery

Rightbanner02_butterfly_inside

Paddehuli Movie Gallery