` ನಟಸಾರ್ವಭೌಮನ ಯಾರೋ ನೀನು ಹಾಡಿನ ವಿಡಿಯೋ ಬಂತು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
natasarvabhouma yaro naanu video song
Yaro Naanu Video Song by Natasarvabhouma

ನಟಸಾರ್ವಭೌಮ ಚಿತ್ರದ ಯಾರೋ ನೀನು ಹಾಡು ಸೂಪರ್ ಹಿಟ್. ಈ ಯುಗಳ ಗೀತೆಯ ಅಕ್ಷರಗಳ ಮೋಡಿಗೆ ಮರುಳಾಗಿದ್ದವರಿಗೆಲ್ಲ ಈಗ ವಿಡಿಯೋ ನೋಡುವ ಚಾನ್ಸ್. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ, ಕಣ್ತುಂಬಿಕೊಂಡು.. ಮತ್ತೊಮ್ಮೆ ಹಾಡು ನೋಡಬೇಕಲ್ಲ ಎನಿಸಿದವರಿಗಾಗಿಯೇ.. ಈ ಯುಗಳ ಗೀತೆಯ ಹೂರಣ ತೆರೆದಿಟ್ಟಿದೆ ರಾಕ್‍ಲೈನ್ ಪ್ರೊಡಕ್ಷನ್ಸ್.

ಮತ್ತೊಮ್ಮೆ.. ಮಗದೊಮ್ಮೆ ಕೇಳುವಂತಿರುವ ಹಾಡು, ರಚಿತಾ ರಾಮ್.. ಪುನೀತ್ ಅವರನ್ನು ಕನಸಿನಲ್ಲಿಯೇ ಪ್ರೀತಿಸುವ ಗೀತೆ. ಹಾಡಿನ ಕೊರಿಯೋಗ್ರಫಿಯೂ ಅಷ್ಟೇ ಚೆನ್ನಾಗಿದೆ. ಡಿ.ಇಮಾನ್ ಮ್ಯೂಸಿಕ್ ನೀಡಿರುವ ಹಾಡಿಗೆ ಸಾಹಿತ್ಯ ಬರೆದಿರುವುದು ಪ್ರೇಮಕವಿ ಕವಿರಾಜ್. ಶ್ರೇಯಾ ಘೋಷಾಲ್ ಕಂಠದಲ್ಲಿ ಮೂಡಿರುವ ಸುಂದರ ಗೀತೆ, ಪ್ರೇಮಲೋಕಕ್ಕೆ ಕರೆದೊಯ್ಯುತ್ತೆ.

Londonalli Lambodara Movie Gallery

Rightbanner02_butterfly_inside

Panchatantra Movie Gallery