` ಜೈ ಹೋ ದರ್ಶನ್ ಫ್ಯಾನ್ಸ್.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan fans
Darshan

ನಾಳೆ (ಫೆಬ್ರವರಿ 16)ರಂದು ದರ್ಶನ್ ಹುಟ್ಟುಹಬ್ಬ. ಈ ಬಾರಿ ಕೇಕ್, ಹಾರ, ಜೈಕಾರ, ಸಂಭ್ರಮಗಳಿಲ್ಲ. ಅಂಬರೀಷ್ ನಿಧನದ ಹಿನ್ನೆಲೆಯಲ್ಲಿ ಸಂಭ್ರಮವನ್ನು ದೂರವಿಟ್ಟಿರುವ ದರ್ಶನ್, ಅಭಿಮಾನಿಗಳಿಗೆ ಬೇರೆಯದೇ ಸಂದೇಶ ಕೊಟ್ಟಿದ್ದರು. ಅಫ್‍ಕೋರ್ಸ್.. ಆ ಸಂದೇಶಕ್ಕೆ ಕಾರಣವಾಗಿದ್ದೂ ಅಭಿಮಾನಿಗಳೇ. ಸಿದ್ಧಗಂಗಾ ಮಠದ ದಾಸೋಹಕ್ಕೆ ದಿನಸಿ ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿದ್ದರು. ಇದನ್ನು ಕಂಡು ಥ್ರಿಲ್ಲಾದ ದರ್ಶನ್, ಹುಟ್ಟುಹಬ್ಬಕ್ಕೆ ಆ ರೀತಿ ದಿನಸಿ ಸಂಗ್ರಹಿಸುವವರಿಗೆ ಸಂದೇಶ ಕೊಟ್ಟರು. 

ಸಂಗ್ರಹಿಸಿದ ದಿನಸಿಯನ್ನು ಪ್ರತಿ ಜಿಲ್ಲೆಯ ಅನಾಥಾಶ್ರಮ, ವೃದ್ಧಾಶ್ರಮ ಹಾಗೂ ಸಿದ್ಧಗಂಗಾ ಮಠಕ್ಕೆ ತಲುಪಿಸುವ ಹೊಣೆಯನ್ನು ತಾವು ನಿರ್ವಹಿಸುವುದಾಗಿ ಹೇಳಿದ್ರು. 

ಈಗ ದರ್ಶನ್ ಮನೆ ಮುಂದೆ ದಿನಸಿಗಳ ರಾಶಿಯೇ ಬಿದ್ದಿದೆ. ಪ್ರತಿದಿನವೂ ಬರುತ್ತಿರುವ ಅಭಿಮಾನಿಗಳು, ಸಮಾಜ ಸೇವೆಗೆ ಕೈ ಜೋಡಿಸುತ್ತಿದ್ದಾರೆ. ಅದಕ್ಕೆ ಹೇಳಿದ್ದು.. ದರ್ಶನ್ ಫ್ಯಾನ್ಸ್‍ಗೆ ಜೈ ಹೋ ಎಂದು. 

ಅಂದಹಾಗೆ ದರ್ಶನ್ ಕೂಡಾ ಸಿದ್ಧಗಂಗಾ ಮಠಕ್ಕೆ ಪ್ರತಿತಿಂಗಳೂ ದಿನಸಿ ನೀಡುತ್ತಾರೆ. 

Shivarjun Movie Gallery

Actor Bullet Prakash Movie Gallery