ಪ್ರೇಮಿಗಳ ದಿನದಂದು ಯುವರತ್ನ ಚಿತ್ರದ ಶೂಟಿಂಗ್ ಆರಂಭಿಸೋದಾಗಿ ಹೇಳಿದ್ದ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಅಂದುಕೊಂಡಂತೆಯೇ ಸ್ಟಾರ್ಟ್.. ಕ್ಯಾಮೆರಾ.. ಆ್ಯಕ್ಷನ್ ಹೇಳಿಬಿಟ್ಟಿದ್ದಾರೆ. ಚಿತ್ರಕ್ಕಿನ್ನೂ ನಾಯಕಿ ಫೈನಲ್ ಆಗಿಲ್ಲ. ಆದರೆ, ವಿಲನ್‍ಗಳು ಫಿಕ್ಸ್.
ನಿನ್ನೆಯಷ್ಟೇ ಯುವರತ್ನ ಚಿತ್ರದಲ್ಲಿ ಡಾಲಿ ಧನಂಜಯ್ ಇರ್ತಾರೆ ಎಂಬ ಸುದ್ದಿ ಕೊಟ್ಟಿದ್ದ ಚಿತ್ರತಂಡ, ಈಗ ಇನ್ನೊಂದು ವಿಲನ್ ಸುದ್ದಿ ಕೊಟ್ಟಿದೆ. ಡಾಲಿ ಜೊತೆ ಚಿಟ್ಟೆ ಕೂಡಾ ಚಿತ್ರದಲ್ಲಿರ್ತಾರಂತೆ.
ಚಿಟ್ಟೆ ವಸಿಷ್ಠ ಸಿಂಹ ಪಾತ್ರ ಏನು..? ಖಳನೋ.. ಪೋಷಕ ನಟನೋ.. ಅನ್ನೋದು ಇನ್ನೂ ಪಕ್ಕಾ ಆಗಿಲ್ಲ. ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾ, ಭರ್ಜರಿ ನಿರೀಕ್ಷೆ ಹುಟ್ಟಿಸುತ್ತಿರುವುದಂತೂ ನಿಜ.