ಸಾಮಾನ್ಯವಾಗಿ ಸ್ಟಾರ್‍ಗಳ ಚಿತ್ರಗಳು ರಿಲೀಸ್ ಆದರೆ ಮೊದಲೆರಡು ದಿನ, ವೀಕೆಂಡ್ ಭರ್ಜರಿ ಹೌಸ್‍ಫುಲ್ ಶೋ ಇರುತ್ತವೆ. ಥಿಯೇಟರುಗಳು ತುಂಬಿ ತುಳುಕುತ್ತವೆ. ಪುನೀತ್ ಸಿನಿಮಾಗಳೂ ಅದಕ್ಕೆ ಹೊಸದಲ್ಲ. ಆದರೆ, ಪುನೀತ್ ಸಿನಿಮಾಗಳು ಬೇರೆಯವರಿಗಿಂತ ಡಿಫರೆಂಟ್ ಎನ್ನುವುದಕ್ಕೆ ಸಾಕ್ಷಿ ನುಡಿಯುತ್ತಿದೆ ನಟಸಾರ್ವಭೌಮ.
ಕನ್ನಡದಲ್ಲಿ ಮೊದಲ ದಿನವೇ ಮಹಿಳಾ ಪ್ರೇಕ್ಷಕರು ಮತ್ತು ಕುಟುಂಬದವರನ್ನು ಥಿಯೇಟರಿಗೆ ಕರೆತರುವ ಶಕ್ತಿ ಇರುವುದು ಪುನೀತ್ ರಾಜ್‍ಕುಮಾರ್‍ಗೆ. ಈಗ ವೀಕೆಂಡ್ ನಂತರ ಅಂದರೆ, ಸೋಮವಾರ, ಮಂಗಳವಾರವೂ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ ನಟಸಾರ್ವಭೌಮ.
ಹೀಗಾಗಿ ಥಿಯೇಟರುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಶೋಗಳ ಸಂಖ್ಯೆಯೂ ಹೆಚ್ಚಿದೆ. ವಿದೇಶದಲ್ಲೂ ಬಿಡುಗಡೆಯಾಗುತ್ತಿರುವ ನಟಸಾರ್ವಭೌಮ, ಪುನೀತ್ ಸಿನಿಮಾಗಳ ಹಿಂದಿನವುಗಳಿಗಿಂತ ಡಿಫರೆಂಟ್ ಎನ್ನುವುದೇ ವಿಶೇಷ. ದಟ್ ಈಸ್ ಪುನೀತ್ ರಾಜ್‍ಕುಮಾರ್.