ನಾಳೆ ರಿಲೀಸ್ ಆಗುತ್ತಿರುವ ಬೆಲ್‍ಬಾಟಂ ಸಿನಿಮಾ, ಅಪ್ಪಟ ಕಾಮಿಡಿ ಥ್ರಿಲ್ಲರ್. ರಿಷಬ್ ಶೆಟ್ಟಿ, ಹರಿಪ್ರಿಯಾ ನಟಿಸಿರುವ ಚಿತ್ರದಲ್ಲಿ ಕಾಮಿಡಿಗೆ ಕೊರತೆಯಿಲ್ಲ. ಆದರೆ, ಇಲ್ಲೇ ಒಂದು ವಿಭಿನ್ನತೆಯಿದೆ. ಇತ್ತೀಚೆಗೆ ಕಾಮಿಡಿ ಸಿನಿಮಾಗಳೆಂದರೆ, ಅಲ್ಲೊಂದಿಷ್ಟು ಡಬಲ್ ಮೀನಿಂಗ್, ತ್ರಿಬ್ಬಲ್ ಮೀನಿಂಗ್, ಡೈರೆಕ್ಟ್ ಮೀನಿಂಗ್ ಡೈಲಾಗುಗಳು ತುಂಬಿ ತುಳುಕುತ್ತವೆ. ಆದರೆ, ಬೆಲ್‍ಬಾಟಂ ಹಾಗಲ್ಲ. ಅಲ್ಲಿರುವುದು ಶುದ್ಧ, ಸ್ವಚ್ಚ ಕಾಮಿಡಿ.
ಡಿಟೆಕ್ಟಿವ್ ಸಿನಿಮಾ ಅಂದಾಕ್ಷಣ, ಇದು ಗಂಭೀರವಾದ ಕಥೆಯಲ್ಲ. ಕಾಮಿಡಿ ಜಾನರ್‍ನಲ್ಲಿಯೇ ಸಾಗುವ ಸಿನಿಮಾ. ಕಾಮಿಡಿ ಎಂದಾಕ್ಷಣ, ಅಲ್ಲಿ ಅಶ್ಲೀಲತೆ, ಮುಜುಗರ ತರಿಸುವ ಸಂಭಾಷಣೆ ಯಾವುದೂ ಇಲ್ಲ. ಇದು ಅಪ್ಪಟ ಕೌಟುಂಬಿಕ ಸಿನಿಮಾ ಎಂದು ಭರವಸೆ ನೀಡಿದ್ದಾರೆ ನಿರ್ದೇಶಕ ಜಯತೀರ್ಥ. ಸಂತೋಷ್ ಕುಮಾರ್ ನಿರ್ಮಾಣದ ಚಿತ್ರದಲ್ಲಿ ಯೋಗರಾಜ್ ಭಟ್, ಶಿವಮಣಿ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ.