ಬೆಲ್‍ಬಾಟಂ ಚಿತ್ರದ ಪ್ರಮೋಷನ್ ಭರ್ಜರಿಯಾಗಿದೆ. ಡಿಫರೆಂಟ್ ಆಗಿದೆ. ಅವರು ಯಾವುದನ್ನೂ ಬಿಟ್ಟಿಲ್ಲ. ಅಟ್ಲಾಸ್ ಸೈಕಲ್ಲು, ಹೊಲಿಗೆ ಮೆಷಿನ್ನು, ದೀಪಾವಳಿ ಲಾಟರಿ, ಹಲ್ಲುಪುಡಿ, ಥ್ರಿಲ್ಲರ್ ಕಾದಂಬರಿ, ಸ್ನೋ ಪೌಡರು.. ಹೀಗೆ ಎಲ್ಲವನ್ನೂ ಚಿತ್ರದ ಪ್ರಚಾರಕ್ಕೆ ಬಳಸಿಕೊಂಡು ಕಿಕ್ ಕೊಟ್ಟಿರೋ ಬೆಲ್‍ಬಾಟಂ, ಒಂದಿಷ್ಟು ಕಾಮಿಡಿಯನ್ನೂ ಬಿಟ್ಟಿದೆ. ಸುಮ್ಮನೆ ಇವುಗಳನ್ನು ಓದುತ್ತಾ ಹೋಗಿ..
ಅಯ್ಯೋ ಸಿವನೆ.. ಈ ನನ್ ಕಂದ ಓದಲ್ಲ.. ಬರೆಯಲ್ಲ.. ಡಿಟೆಕ್ಟಿವ್ ಆಗ್ತೀನಿ ಅಂತ ಕುಂತದಲ್ಲ. ಇದನ್ನು ತಗೊಂಡು ಏನ್ ಮಾಡ್ಲಿ, ಒಂದ್ ತಾಯತನಾದ್ರೂ ಕಟ್ಟುಸ್ಲ..
ತಾಯಿ ಹೀಗೆ ಯೋಚಿಸ್ತಿದ್ರೆ, ಟಾಪಲ್ಲಿ ಎದೆ ಕಲಕುವ ಸೆಂಟಿಮೆಂಟ್ ಪತ್ತೇದಾರಿ ಪಿಕ್ಚರ್ ಎಂಬ ಒಕ್ಕಣೆ. ಮತ್ತೊಂದು ಕಡೆ ಚಿತ್ರಚೋರ ರಿಷಬ್ ಶೆಟ್ಟಿ, ಹಂಸವದನೆ ಹರಿಪ್ರಿಯಾ ನಟನೆಯಲ್ಲಿ.. ಎಂಬ ಸಾಲು. ಟೆಂಟ್ ಸಿನಿಮಾ ನೆನಪಾಯ್ತಾ..
ಕಂಟಿನ್ಯೂ.. ಕಂಟಿನ್ಯೂ..
ಸರ್ಪದೇವನ ಶಾಪದಿಂದ ಸಂಸಾರವನ್ನು ರಕ್ಷಿಸುವ ಗೃಹಿಣಿಯೊಬ್ಬಳ ಮೈನವಿರೇಳಿಸುವ ಸಾಹಸಯಮ ಕಥೆ. ಹೊಚ್ಚ ಹೊಸ ಕಾದಂಬರಿ, ಇದೀಗ ಮಾರುಕಟ್ಟೆಯಲ್ಲಿ ಲಭ್ಯ.
ಇದು ಕಾದಂಬರಿ ಸ್ಟೈಲು. ಮುಂದಿನದ್ದು.. ಕೆಜಿಎಫ್ ಸ್ಟೈಲು.
ಕೆಜಿಎಫ್ ಡಾನ್ : ನಂಗೊಂದ್ ಕೆಲಸ ಆಗಬೇಕು. ಒಂದ್ ಆನೇ ಹೊಡೀಬೇಕು.
ಡಿಟೆಕ್ಟಿವ್ ದಿವಾಕರ : ಅಷ್ಟು ದೊಡ್ಡ ಪ್ರಾಣೀನೇ ಯಾಕೆ..?
ಕೆಜಿಎಫ್ ಡಾನ್ : ಮಗಳ ಮದುವೆ ಆಯ್ತು. ಬೀಗರಿಗೆ ಗ್ರ್ಯಾಂಡ್ ಆಗಿ ಊಟ ಹಾಕಿಸ್ಬೇಕು.
ಡಿಟೆಕ್ಟಿವ್ ದಿವಾಕರ : ಸಾರಿ ಆಂಡ್ರೂಸ್. ಆನೆ ಹೊಡೆದ್ರೆ ಅರಣ್ಯ ಇಲಾಖೆಯವರು ಕೇಸ್ ಹಾಕ್ತಾರೆ. ಬೇಕಾದ್ರೆ 50 ಕೆಜಿ ನಾಟಿಕೋಳಿ ಕೊಡ್ತೀನಿ. ಎಂಜಾಯ್.
ಇದು ಸಿನಿಮಾ ಸ್ಟೈಲು. ಧಾರಾವಾಹಿ ಬುಟ್‍ಬುಡ್ತಾರಾ..? ಅಲ್ಲಿ ಪುಟ್ಟಗೌರಿ ಸ್ಟೈಲು. ಅತ್ತ.. ಗೆಳೆಯ ರಕ್ಷಿತ್ ಶೆಟ್ಟಿಯ ರಿಲೀಸ್ ಕೂಡಾ ಆಗದ ಅವನೇ ಶ್ರೀಮನ್ನಾರಾಯಣನೂ ಬೆಲ್‍ಬಾಟಂ ಪ್ರಚಾರಕ್ಕೆ ಬಂದಿದ್ದಾನೆ.
ರಕ್ಷಿತ್ ಶೆಟ್ಟಿ : ಅವನು ಚರ್ಮ ವೈದ್ಯ ಅಲ್ಲ ಅಂತ ಹೆಂಗೆ ಪತ್ತೆ ಹಚ್ಚಿದೆ ದಿವಾಕರ..?
ದಿವಾಕರ : ಬಡ್ಡಿ ಮಗ, ಕ್ಲಿನಿಕ್ ಬೋರ್ಡಲ್ಲಿ ಲೆದರ್ ಸ್ಪೆಷಲಿಸ್ಟ್ ಅಂತಾ ಹಾಕ್ಕೊಂಡಿದ್ದ.
ಫೈನಲ್ಲಾಗಿ.. ಟೈಟಾನಿಕ್ ನೋಡ್ಕಳಿ..
ಟೈಟಾನಿಕ್ ಹಡಗು ಮುಳುಗೋಕೆ ಕಾರಣ ಏನ್ ಗೊತ್ತಾ..? ದಿವಾಕರನ ಪತ್ತೆದಾರಿಕೆಯ ವರದಿ ಇಷ್ಟೆ. ಟೈಟಾನಿಕ್ ಹಡಗಿಗೆ ಮಂತ್ರಿಸಿದ ನಿಂಬೆಹಣ್ಣನ್ನೇ ಕಟ್ಟಿಲ್ಲ. ಅಷ್ಟೆಲ್ಲ ದೃಷ್ಟಿ ಆದ್ರೆ ಇನ್ನೇನಾಗುತ್ತೆ. ಸ್ಸೋ.. ದೃಷ್ಟಿ ತಗುಲಿ ಟೈಟಾನಿಕ್ ಮುಳುಗಿದೆ.