ಟಗರು ಚಿತ್ರದ ಡಾಲಿ ಪಾತ್ರದ ನಂತರ ಹೀರೋ, ವಿಲನ್ ಎಂದು ತಲೆಕೆಡಿಸಿಕೊಳ್ಳದ ಧನಂಜಯ್, ಇಷ್ಟವಾದ ಪಾತ್ರಗಳನ್ನೆಲ್ಲ ಮಾಡುತ್ತಿದ್ದಾರೆ. ಈಗ ಪುನೀತ್ ಅವರ ಯುವರತ್ನ ಚಿತ್ರಕ್ಕೆ ವಿಲನ್ ಆಗಿ ಕಮಿಟ್ ಆಗಿದ್ದಾರೆ. ಅಲ್ಲಿಗೆ ಇದು ಅವರಿಗೆ ವಿಲನ್ ಆಗಿ 3ನೇ ಸಿನಿಮಾ. ಏಕಂದ್ರೆ, ಈಗಾಗಲೇ ಟಗರುನಲ್ಲಿ ವಿಲನ್ ಆಗಿದ್ರು. ಧ್ರುವ ಸರ್ಜಾರ ಪೊಗರುನಲ್ಲೂ ಅವರೇ ವಿಲನ್ನು. ಜಗಪತಿ ಬಾಬು ಜೊತೆ. ಈಗ ಯುವರತ್ನ ಚಿತ್ರಕ್ಕೂ ವಿಲನ್. ದುನಿಯಾ ವಿಜಿಯವರ ಸಲಗ ಚಿತ್ರದಲ್ಲೂ ಅವರೇ ವಿಲನ್ ಅಂತೆ.
ಅಂದಹಾಗೆ.. ದರ್ಶನ್ ಅವರ ಯಜಮಾನ ಚಿತ್ರದಲ್ಲಿ ಅವರು ವಿಲನ್ ಅಲ್ಲ. ತೋತಾಪುರಿಯಲ್ಲೂ ಅವರದ್ದು ಸಣ್ಣ ಪಾತ್ರ.
ಇದೆಲ್ಲದರ ಜೊತೆಗೆ ಹೀರೋ ಆಗಿ ಪಾಪ್‍ಕಾರ್ನ್ ಮಂಕಿ ಟೈಗರ್, ಡಾಲಿ ಚಿತ್ರಗಳಿವೆ.
`ನಾನು ಬಂದಿದ್ದು ರಂಗಭೂಮಿಯಿಂದ. ಕೊಟ್ಟ ಪಾತ್ರಕ್ಕೆ ಜೀವ ತುಂಬಬೇಕು. ಇಂಥದ್ದೇ ಪಾತ್ರ ಎಂದು ಕೂರಬಾರದು. ಈ ಕಾರಣಕ್ಕೆ ಸಿಗುತ್ತಿರುವ, ಇಷ್ಟವಾಗುತ್ತಿರುವ ಪಾತ್ರಗಳನ್ನು ಹೀರೋ, ವಿಲನ್, ಪೋಷಕ ಪಾತ್ರ ಎಂದು ನೋಡದೆ ಒಪ್ಪಿಕೊಳ್ಳುತ್ತಿದ್ದೇನೆ' ಎಂದಿದ್ದಾರೆ ಧನಂಜಯ್.