ರಿಷಬ್ ಶೆಟ್ಟಿ ಎಂದರೆ ಥಟ್ಟನೆ ಕಣ್ಮುಂದೆ ಬರೋದು ಕಿರಿಕ್ ಪಾರ್ಟಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ. ಎರಡು ಸೂಪರ್ ಹಿಟ್ ಚಿತ್ರ ಕೊಟ್ಟಿರುವ ರಿಷಬ್ ಶೆಟ್ಟಿ, ಸಣ್ಣ ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ. ತುಗ್ಲಕ್ ಚಿತ್ರದಲ್ಲಿಯೇ ಮೊದಲ ಬಾರಿಗೆ ಬಣ್ಣ ಹಚ್ಚಿದ್ದ ರಿಷಬ್ ಶೆಟ್ಟಿ, ಈಗ ಪೂರ್ಣ ಪ್ರಮಾಣದ ಹೀರೋ.
ಹಾಗೆ ನೊಡಿದರೆ ರಿಷಬ್, ಹೀರೋ ಆಗಲೆಂದೇ ಚಿತ್ರರಂಗಕ್ಕೆ ಬಂದು ಡೈರೆಕ್ಟರ್ ಆದವರು. ಈಗ ಬೆಲ್‍ಬಾಟಂ ಚಿತ್ರದಲ್ಲಿ ಡಿಟೆಕ್ಟಿವ್ ಸುಧಾಕರ್ ಆಗಿದ್ದಾರೆ. ಹರಿಪ್ರಿಯಾ ರಿಷಬ್ ಶೆಟ್ಟಿಗೆ ನಾಯಕಿ. ಜಯತೀರ್ಥ ನಿರ್ದೇಶನದ ಚಿತ್ರದಲ್ಲಿ ಯೋಗರಾಜ್ ಭಟ್, ಶಿವಮಣಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ಟಿ.ಕೆ.ದಯಾನಂದ್ ಅವರ ಕಥೆ ಚಿತ್ರದಲ್ಲಿದೆ.
ಒಟ್ಟಿನಲ್ಲಿ ಗೆಳೆಯರೆಲ್ಲ ಒಂದಾಗಿ ಮಾಡಿರುವ ಸಿನಿಮಾ ಬೆಲ್‍ಬಾಟಂ, ಇದೇ ವಾರ ತೆರೆಗೆ ಬರುತ್ತಿದೆ.