ಎ ಚಿತ್ರದ ಪೋಸ್ಟರ್ ನೆನಪಿದೆಯಲ್ಲವೇ.. ಉಪೇಂದ್ರ ಚಿತ್ರದ್ದು. ಉಪ್ಪಿ ನಿರ್ದೇಶನದ ಉಪ್ಪಿ2 ಚಿತ್ರದ ಪೋಸ್ಟರ್. ಹೀಗೆ ಪೋಸ್ಟರ್‍ಗಳ ಮೂಲಕವೇ ತಲೆಗೆ ಹುಳ ಬಿಟ್ಟು ಗೆದ್ದವರು ಉಪೇಂದ್ರ. ತಲೆಗೆ ಹುಳ ಬಿಡದೆ.. ಹಳೆಯ ದಿನಗಳನ್ನೆಲ್ಲ ನೆನಪಿಸಿ ನೆನಪಿಸಿ ಪ್ರಚಾರ ಮಾಡುತ್ತಿರುವುದು ಬೆಲ್‍ಬಾಟಂ.
ಇದೇ ಫೆಬ್ರವರಿ 15ಕ್ಕೆ ರಿಲೀಸ್ ಆಗುತ್ತಿರುವ ಬೆಲ್‍ಬಾಟಂ ಚಿತ್ರದ ಪೋಸ್ಟರ್‍ಗಳು ತಮ್ಮ ವಿಭಿನ್ನತೆಯಿಂದಲೇ ಗಮನ ಸೆಳೆದಿವೆ. 78-80ರ ದಶಕದ ಜಾಹೀರಾತುಗಳಿದ್ದವಲ್ಲ. ಅಟ್ಲಾಸ್ ಸೈಕಲ್ಲು, ಇಮಾಮಿ, ಬೀಡಿಗಳು, ಹಳೇ ಟಿವಿ.. ಹೀಗೆ ಎಲ್ಲವೂ ಹಳೆಯ ಸ್ಟೈಲ್. ಆ ಸ್ಟೈಲ್ ಮೂಲಕವೇ ಪ್ರಚಾರ ಮಾಡಿ ಗೆದ್ದಿದ್ದಾರೆ ನಿರ್ದೇಶಕ ಜಯತೀರ್ಥ.
ರಿಷಬ್ ಶೆಟ್ಟಿ, ಹರಿಪ್ರಿಯಾ ಜೋಡಿಯ ಚಿತ್ರ ರೆಟ್ರೋ ಸ್ಟೈಲ್ ಸಿನಿಮಾ. ನಿರ್ದೇಶಕ ಯೋಗರಾಜ್ ಭಟ್ ಕೂಡಾ ಪ್ರಧಾನ ಪಾತ್ರದಲ್ಲಿರುವ ಬೆಲ್‍ಬಾಟಂ ಇದೇ ವಾರ ತೆರೆಗೆ ಬರುತ್ತಿದೆ.