ರಿಷಬ್ ಶೆಟ್ಟಿ.. ಅಲ್ಲಲ್ಲ ಡಿಟೆಕ್ಟಿವ್ ದಿವಾಕರ.. ಕುಸುಮಾ.. ಅದೇ ರೀ.. ಹರಿಪ್ರಿಯಾ. ಅವರಿಬ್ಬರಿಗೂ ಲವ್ವಾಗಿದೆ. ಇದೆಲ್ಲ ಆಗಿದ್ದು ಹೀಗೆ.. ದಿವಾಕರ್ ಸ್ಕೂಟರಲ್ಲಿ ಹೋಗ್ತಾ ಇದ್ರು. ಹರಿಪ್ರಿಯಾ ಅಲ್ಲೇ ನೀರು ಕುಡೀತಾ ಇದ್ರು. ಅದೇ ಟೈಮಲ್ಲಿ ಇನ್ನೊಬ್ಬ ಬಾಟ್ಲೀಲಿ ಮೀನು ಹಿಡ್ಕೊಂಡು ಬರ್ತಾ ಇದ್ದ. ಬಾಟ್ಲಿ ಹೊಡ್ದೋಯ್ತು. ನೀರು ರೋಡಿಗ್ ಬಿತ್ತು.
ರಿಷಬ್ ಓಡೋಡಿ ಬಂದು ಮೀನನ್ನ ಬೊಗಸೆಯಲ್ಲಿಡ್ಕೊಂಡ್ರೆ, ಹರಿಪ್ರಿಯಾ ಬಾಯಲ್ಲಿದ್ದ ನೀರನ್ನ ರಿಷಬ್ ಕೈಗೆ ಉಗಿದು.. ಮೀನನ್ನ ಬದುಕಿಸಿಬಿಟ್ರು. ಲವ್ ಶುರುವಾಗಿದ್ದೇ ಆವಾಗ..
ಏತಕೆ.. ಬೊಗಸೆ ತುಂಬ ಆಸೆ ನೀಡುವೆ ಎಂದು ಹಾಡು ಶುರುವಾಗಿ ಹೋಯ್ತು.
ಇಬ್ಬರಿಗೂ ಹಿಂಗಿಂಗೇ ಲವ್ ಮಾಡ್ಬೇಕು ಅಂತಾ ಲವ್ ಮಾಡ್ಸಿರೋದು ನಿರ್ದೇಶಕ ಜಯತೀರ್ಥ. ನೀವ್ ಲವ್ ಮಾಡೋದಕ್ಕೆ ಖರ್ಚು ನಮ್ದು ಅಂದಿರೋದು ಸಂತೋಷ್ ಕುಮಾರ್. ಇಬ್ಬರ ಪ್ರೀತಿಗೆ ಸಂಗೀತದ ಸ್ಪರ್ಶ ಕೊಟ್ಟಿರೋದು ಅಜನೀಶ್ ಲೋಕನಾಥ್. ಹೇಗಿದೆ ಇಬ್ಬರ ಪ್ರೀತಿ.. ಪ್ರೇಮಿಗಳ ದಿನ ಕಳೆದ ಮಾರನೇ ದಿನವೇ ನೀವೆಲ್ಲ ನೋಡಬಹುದು. ಬೆಲ್‍ಬಾಟಂ ಅವತ್ತೇ ರಿಲೀಸು.