ಭೈರಾದೇವಿ ಚಿತ್ರದಲ್ಲಿ ಅಘೋರಿಯ ಪಾತ್ರದಲ್ಲಿ ನಟಿಸುತ್ತಿರುವ ರಾಧಿಕಾ ಕುಮಾರಸ್ವಾಮಿ, ಬಿದ್ದು ಬೆನ್ನುಮೂಳೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಸ್ಪೈನಲ್ ಕಾರ್ಡ್ ಡ್ಯಾಮೇಜ್ ಆಗಿದ್ದು, ಒಂದು ತಿಂಗಳು ಬೆಡ್ ರೆಸ್ಟ್ ಹೇಳಿದ್ದಾರಂತೆ ವೈದ್ಯರು. ಹೀಗಾಗಿ ಭೈರಾದೇವಿ ಚಿತ್ರದ ಶೂಟಿಂಗ್ ಕೂಡಾ ಒಂದು ತಿಂಗಳು ಪೋಸ್ಟ್ಪೋನ್ ಆಗಿದೆ.
ಬೆಂಗಳೂರಿನ ಶಾಂತಿನಗರದ ಸ್ಮಶಾನದಲ್ಲಿ ಸಮಾಧಿಯ ಮೇಲೆ ಕುಳಿತು, ಆತ್ಮಗಳನ್ನು ಆವಾಹನೆ ಮಾಡಿಕೊಳ್ಳುವ ದೃಶ್ಯದ ಶೂಟಿಂಗ್ ವೇಳೆಯಲ್ಲಿಯೇ ಈ ಅವಘಡ ಸಂಭವಿಸಿದೆ.