ಮದುವೆಯಾಗು.. ಹುಡುಗಿ ನೋಡು.. ಎನ್ನುತ್ತಿದ್ದ ತಾಯಿಗೆ ಹುಡುಗಿಯನ್ನು ನೋಡಿಕೊಂಡು ಬಂದ ಮಗ ಹೇಳ್ತಾನೆ. ``ನಾನೊಂದು ಹುಡುಗಿಯನ್ನ ಇಷ್ಟಪಟ್ಟಿದ್ದೀನಿ. ಅವಳನ್ನೇ ಮದುವೆಯಾಗ್ತೀನಿ' ತಾಯಿ ಹೇಳ್ತಾಳೆ `ಕೇಳೋಣ ಬಿಡು' ಆದರೆ ಮಗನ ಮುಂದಿನ ರಿಯಾಕ್ಷನ್ ನೋಡಿ.. ಕೇಳೋದಾದ್ರೆ, ಅವಳ ಗಂಡನ್ನೇ ಕೇಳಬೇಕು..
ಇಂತಹ ಸಣ್ಣದೊಂದು ಪಂಚ್ ಕೊಟ್ಟೇ ಟ್ರೇಲರ್ ಬಿಟ್ಟಿದ್ದಾರೆ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್. ಆದಿಲಕ್ಷ್ಮೀ ಪುರಾಣದ ಟ್ರೇಲರ್‍ನ ಝಲಕ್ ಇದು. ನಿರೂಪ್ ಭಂಡಾರಿ ಮತ್ತು ರಾಧಿಕಾ ಪಂಡಿತ್ ಅಭಿನಯದ ಈ ಸಿನಿಮಾಗೆ ಪ್ರಿಯಾ ನಿರ್ದೇಶಕಿ.
2016ರಲ್ಲಿ ಯಶ್ ಜೊತೆ ನಟಿಸಿದ್ದ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದ ನಂತರ ರಾಧಿಕಾ ಪಂಡಿತ್ ಅವರು ನಟಿಸಿರುವ ಚಿತ್ರವಿದು. ಯಶ್ ಅವರನ್ನು ಮದುವೆಯಾದ ಮೇಲೆ ಮತ್ತೊಮ್ಮೆ ತೆರೆ ಮೇಲೆ ಕಾಣಿಸಿಕೊಂಡಿರೋ ಮೊದಲ ಚಿತ್ರ.