ನಟಸಾರ್ವಭೌಮ ಚಿತ್ರದ ರಿಲೀಸ್ ಆಗುವುದಕ್ಕೂ ಮುನ್ನವೇ ಚಿತ್ರತಂಡವನ್ನು ಕಾಡುತ್ತಿರುವುದು ಪೈರಸಿ. ಇದು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರನ್ನೂ ಕಂಗೆಡಿಸಿದೆ. ಹೀಗಾಗಿಯೇ.. ಅವರು ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡರೂ ಸಹ, ಅವರು ಒಂದು ದೊಡ್ಡ ಸೈನ್ಯಕ್ಕೆ ಮನವಿ ಮಾಡಿಕೊಂಡಿದ್ದಾರೆ. ಅದು ಅಪ್ಪು ಅಭಿಮಾನಿಗಳ ಸೈನ್ಯ.
ನಟಸಾರ್ವಭೌಮ ಅಭಿಮಾನಿಗಳಿಗಾಗಿಯೇ ಮಾಡಿರುವ ಸಿನಿಮಾ. ಚಿತ್ರವನ್ನು ಚಿತ್ರಮಂದಿರದಲ್ಲಿಯೇ ನೋಡಿ. ಪೈರಸಿ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಡಬೇಡಿ. ಹಾಗೆ ಹರಡುವವರನ್ನು ಕಂಡರೆ, ತಕ್ಷಣ ನಮಗೆ ಮಾಹಿತಿ ನೀಡಿ. ಅಭಿಮಾನಿಗಳೇ ಬೆನ್ನೆಲುಬು. ಅವರೇ ಇಂತಹ ಪೈರಸಿಯನ್ನು ತಡೆಯಬೇಕು ಎಂದು ಮನವಿ ಮಾಡಿದ್ದಾರೆ ರಾಕ್‍ಲೈನ್ ವೆಂಕಟೇಶ್. ನಟಸಾರ್ವಭೌಮ ಸಿನಿಮಾ, ನಾಳೆ ರಿಲೀಸ್ ಆಗುತ್ತಿದೆ.