ನಟಸಾರ್ವಭೌಮ, ಪುನೀತ್ ರಾಜ್‍ಕುಮಾರ್ ಅವರ ಎಷ್ಟನೇ ಸಿನಿಮಾ. ಪುನೀತ್ ಅವರಿಗಿಂತಲೂ ಅವರ ಅಭಿಮಾನಿಗಳಿಗೆ ಚೆನ್ನಾಗಿ ಗೊತ್ತಿರುತ್ತೆ. ಅಂದಹಾಗೆ ಪುನೀತ್ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ್ದು ತಮ್ಮ 6ನೇ ತಿಂಗಳಲ್ಲಿ. ಪ್ರೇಮದ ಕಾಣಿಕೆ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಮಯವದು. ಪುನೀತ್ ಆಗಿನ್ನೂ 6 ತಿಂಗಳ ಮಗು. ರಾಜ್-ಜಯಮಾಲಾ ಜೋಡಿ ಮುದ್ದು ಮಗುವಾಗಿ ಕಾಣಿಸಿಕೊಂಡಿದ್ದರು ಅಪ್ಪು.
ಅದಾದ ಮೇಲೆ ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತ, ಭೂಮಿಗೆ ಬಂದ ಭಗವಂತ, ಚಲಿಸುವ ಮೋಡಗಳು, ಹೊಸ ಬೆಳಕು.. ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದರು. ಬೆಟ್ಟದ ಹೂವು ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಮತ್ತು ರಾಷ್ಟ್ರಪ್ರಶಸ್ತಿಯನ್ನು ಪಡೆದ ಅಪ್ಪು, ನಾಯಕರಾಗಿ ನಟಿಸಿದ ಮೊದಲ ಸಿನಿಮಾ ಅಪ್ಪು.
ಹೀರೋ ಆಗಿ ಅಪ್ಪು ಮೊದಲ ಸಿನಿಮಾ ಆದರೆ, ನಟನಾಗಿ ಪ್ರೇಮದ ಕಾಣಿಕೆ ಮೊದಲ ಸಿನಿಮಾ. ಹೀಗಾಗಿ ಹೀರೋ ಅಪ್ಪುಗೆ ನಟಸಾರ್ವಭೌಮ 28ನೇ ಚಿತ್ರವಾದರೆ, ಕಲಾವಿದನಾಗಿ ಇದು 41ನೇ ಸಿನಿಮಾ.