` ಯಂಗ್ ರೆಬಲ್‍ಗೆ ಕಿಚ್ಚನ ಸ್ವಾಗತ.. ಸುಮಲತಾ ಸಂತಸ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudeep welcomes young rebel star
Sudeep Welcome Junior Rebel Star

ಜ್ಯೂನಿಯರ್ ಅಂಬರೀಷ್ ಅಭಿಷೇಕ್ ಅಭಿನಯದ ಮೊದಲ ಸಿನಿಮಾದ ಟೀಸರ್ ಫೆಬ್ರವರಿ 14ಕ್ಕೆ ಬರುತ್ತಿದೆ. ಟೀಸರ್‍ಗೆ ಮುನ್ನ ಚಿತ್ರದ ಫಸ್ಟ್‍ಲುಕ್ ಹೊರಬಿಟ್ಟಿದೆ ಅಮರ್ ಟೀಂ. ಫೆಬ್ರವರಿ 14ರಂದು ಟೀಸರ್ ಬರುತ್ತಿದೆ ಎಂದು ಬಿಟ್ಟಿರುವ ಪೋಸ್ಟರ್‍ಗೆ ಕಿಚ್ಚ ಸುದೀಪ್ ಶುಭ ಹಾರೈಸಿದ್ದಾರೆ. ಸ್ವಾಗತ ಕೋರಿದ್ದಾರೆ.

ನಾಗಶೇಖರ್ ನಿರ್ದೇಶನದ ಚಿತ್ರಕ್ಕೆ ಸಂದೇಶ್ ನಾಗರಾಜ್ ನಿರ್ಮಾಪಕ. ತಾನ್ಯಾ ಹೋಪ್ ನಾಯಕಿ. 

ಕಿಚ್ಚನ ಸ್ವಾಗತಕ್ಕೆ ಖುಷಿಗೊಂಡಿರುವುದು ಸುಮಲತಾ. ನಿಮ್ಮ ಸ್ಫೂರ್ತಿದಾಯಕ ಮಾತುಗಳು ಸದಾ ಅಭಿ ಹಾಗೂ ನನ್ನನ್ನು ಉತ್ಸಾಹಿಗಳನ್ನಾಗಿಸುತ್ತೆ. ಬಾಂಧವ್ಯ ಹೀಗೆಯೇ ಮುಂದುವರಿಯಲಿ ಎಂದಿದ್ದಾರೆ ಸುಮಲತಾ.

ಕಿಚ್ಚ ಅಷ್ಟೇ ಅಲ್ಲ, ಚಿತ್ರರಂಗದ ಹಲವು ಗಣ್ಯರು ಅಭಿಷೇಕ್‍ಗೆ ಸ್ವಾಗತ ಕೋರಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery