ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಎದುರು ನಟಿಸಿರುವ ರಚಿತಾ ರಾಮ್‍ಗೆ, ಅಪ್ಪು ಜೊತೆ ಇದು 2ನೇ ಸಿನಿಮಾ. ಪುನೀತ್ ಜೊತೆ 2 ಚಿತ್ರಗಳಲ್ಲಿ ನಟಿಸಿರುವ ಖುಷಿಯಿದ್ದರೂ, ಅವರ ಆಸೆ ಕಂಪ್ಲೀಟ್ ಈಡೇರಿಲ್ಲ. ಈಗಲೂ ರಚಿತಾಗೆ ಅದೊಂದು ಬೇಸರ ಇದೆಯಂತೆ.
ಚಿತ್ರರಂಗಕ್ಕೇ ಗೊತ್ತಿರೋ ಹಾಗೆ ಅಪ್ಪು ಅದ್ಭುತ ಡ್ಯಾನ್ಸರ್. ಆದರೆ, 2 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರೂ, ರಚಿತಾಗೆ ಪುನೀತ್ ಜೊತೆ ಡ್ಯಾನ್ಸ್ ಮಾಡುವ ಅವಕಾಶ ಸಿಕ್ಕಿಲ್ಲ.
ನನಗೆ ಇನ್ನೂ ಒಂದು ಚಿತ್ರದಲ್ಲಿ ಅಪ್ಪು ಜೊತೆ ನಟಿಸುವ ಅವಕಾಶ ಸಿಕ್ಕೇ ಸಿಗುತ್ತೆ. ಆಗ ನನ್ನ ಮೊದಲ ಡಿಮ್ಯಾಂಡ್, ಅಪ್ಪು ಜೊತೆ ಒಂದು ಡ್ಯಾನ್ಸ್ ಬೇಕು ಅನ್ನೋದು ಅಂತಾರೆ ರಚಿತಾ.