ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಟೈಟಲ್ ಸಾಂಗ್ ಅಕ್ಷರಶಃ ಮ್ಯಾಜಿಕ್ ಮಾಡಿಬಿಟ್ಟಿದೆ. ಸಂತೋಷ್ ಆನಂದ್ ರಾಮ್ ಬರೆದಿರುವ ಮಾತು ತಪ್ಪದ ಯಜಮಾನ.. ಹಾಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದರ್ಶನ್ ಅವರ ಇದುವರೆಗಿನ ಎಲ್ಲ ಚಿತ್ರಗಳ ಹಾಡುಗಳಿಗೆ ಹೋಲಿಸಿದರೆ, ಇದು ಕಂಪ್ಲೀಟ್ ಡಿಫರೆಂಟ್.
ಹಾಡು ರಿಲೀಸ್ ಆದ ಕೇವಲ 6 ನಿಮಿಷದಲ್ಲಿ 1 ಲಕ್ಷ ಮಂದಿ, 20 ನಿಮಿಷದಲ್ಲಿ 2 ಲಕ್ಷ ಮಂದಿ ವೀಕ್ಷಿಸಿ ದಾಖಲೆ ಬರೆದಿದೆ ಯಜಮಾನ ಟೈಟಲ್ ಸಾಂಗ್. ಈಗ ಒಂದು ಮಿಲಿಯನ್ ವ್ಯೂ ದಾಟಿ ಮುನ್ನುಗ್ಗುತ್ತಿದೆ ಯಜಮಾನನ ಟೈಟಲ್ ಸಾಂಗ್.
ಶೈಲಜಾ ನಾಗ್, ಬಿ.ಸುರೇಶ್ ನಿರ್ಮಾಣದ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ಹರಿಕೃಷ್ಣ, ಕುಮಾರ್ ನಿರ್ದೇಶನದ ಸಿನಿಮಾಗೆ ಹರಿಕೃಷ್ಣ ಅವರೇ ಮ್ಯೂಸಿಕ್ ಡೈರೆಕ್ಟರ್. ವಿಜಯ್ ಪ್ರಕಾಶ್ ಹಾಡಿರುವ ಹಾಡು, ಈಗ ಸೃಷ್ಟಿಸಿರುದು ಮ್ಯಾಜಿಕ್.