` ಆ 3 ಕಾರಣ ಸಾಕಿತ್ತು.. ರಚಿತಾ ಓಕೆ ಎನ್ನೋಕೆ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
main reason why rachita accepted natasarvabhouma
Puneeth Rajkumar, Rachita Ram Image from Natasarvabhouma

ರಚಿತಾ ರಾಮ್, ಈಗ ಡಿಂಪಲ್ ಸ್ಟಾರ್. ಬೆನ್ನು ಬೆನ್ನಿಗೇ ಅವರ ಚಿತ್ರಗಳು ರಿಲೀಸ್ ಆಗುತ್ತಿವೆ. ಸೀತಾರಾಮ ಕಲ್ಯಾಣ, ಚಿತ್ರಮಂದಿರಗಳಲ್ಲಿ ಯಶಸ್ಸಿನ ಸಂಭ್ರಮದಲ್ಲಿರುವಾಗಲೇ ನಟಸಾರ್ವಭೌಮ ರಿಲೀಸ್ ಆಗುತ್ತಿದೆ. ನಟಸಾರ್ವಭೌಮ ಚಿತ್ರದ ಮೊದಲ ಆಯ್ಕೆ ರಚಿತಾ ಆಗಿರಲಿಲ್ಲ. ಆದರೂ.. ಅವರು ಪಾತ್ರದ ಆಫರ್ ಬಂದ ಕೂಡಲೇ ಓಕೆ ಎಂದಿದ್ದೇಕೆ ಗೊತ್ತಾ..?

ಕಾರಣ ನಂ.1 - ಪುನೀತ್ ರಾಜ್ ಕುಮಾರ್

ಪುನೀತ್ ಜೊತೆ ಅದಾಗಲೇ ಚಕ್ರವ್ಯೂಹ ಚಿತ್ರದಲ್ಲಿ ಅಭಿನಯಿಸಿದ್ದ ರಚಿತಾ ರಾಮ್, ಸಿಗುತ್ತಿರುವ 2ನೇ ಅವಕಾಶವನ್ನೂ ಬಿಡೋಕೆ ತಯಾರಿರಲಿಲ್ಲ. ಪುನೀತ್ ಹೀರೋ ಎಂದ ಕೂಡಲೇ ಓಕೆ ಎಂದರು.

ಕಾರಣ ನಂ. 2 - ಪವನ್ ಒಡೆಯರ್ 

ಪವನ್ ಒಡೆಯರ್ ಅವರ ಸಿನಿಮಾಗಳ ಬಗ್ಗೆ ಕೇಳಿದ್ದೆ. ಸಿನಿಮಾಗಳನ್ನು ನೋಡಿ ಇಷ್ಟಪಟ್ಟಿದ್ದೆ. ಆದರೆ, ಅವಕಾಶಗಳು ಸಿಕ್ಕಿರಲಿಲ್ಲ. ಅವಕಾಶ ಸಿಕ್ಕಾಗ ಬಿಡಬೇಕು ಎನ್ನಿಸಲಿಲ್ಲ.

ಕಾರಣ ನಂ.3 - ರಾಕ್‍ಲೈನ್ ವೆಂಕಟೇಶ್

ಕನ್ನಡದ ಅತಿದೊಡ್ಡ ನಿರ್ಮಾಪಕರು ಅವರು. ಅವರ ಬ್ಯಾನರ್‍ನಲ್ಲಿ ನಟಿಸುವ ಅವಕಾಶ ಮಿಸ್ ಮಾಡಿಕೊಳ್ಳೋಕೆ ಸಾಧ್ಯವೇ ಇರಲಿಲ್ಲ. ಅವರು ಕೇಳಿದ ಕೂಡಲೇ, ಯೆಸ್ ಎಂದುಬಿಟ್ಟೆ.

ಅದಕ್ಕೆ ತಕ್ಕಂತೆ, ಕಥೆ, ಪಾತ್ರ ಎಲ್ಲವೂ ಅದ್ಭುತವಾಗಿದೆ ಎನ್ನುತ್ತಾರೆ ರಚಿತಾ ರಾಮ್.