ವೃತ್ರ ಅನ್ನೋ ವಿಚಿತ್ರ ಹೆಸರಿನ ಸಿನಿಮಾ ತನ್ನ ವಿಭಿನ್ನ ಟೈಟಲ್ ಹಾಗೂ ರಶ್ಮಿಕಾ ಮಂದಣ್ಣರ ಕಾರಣದಿಂದಾಗಿ ಸುದ್ದಿಯಾಗಿತ್ತು. ಕೆಲವು ತಿಂಗಳ ಹಿಂದೆಯೇ ಶುರುವಾಗಬೇಕಿದ್ದ ಸಿನಿಮಾ, ರಶ್ಮಿಕಾ ಮಂದಣ್ಣ ಚಿತ್ರದಿಂದ ಹೊರ ನಡೆಯುವುದರೊಂದಿಗೆ ಮುಂದಕ್ಕೆ ಹೋಗಿತ್ತು. ಈಗ ಚಿತ್ರ ಮತ್ತೆ ಟೇಕಾಫ್ ಆಗಿದ್ದು, ರಶ್ಮಿಕಾ ಜಾಗಕ್ಕೆ ನಿತ್ಯಶ್ರೀ ಬಂದಿದ್ದಾರೆ. ಈಕೆ, ಈಗಾಗಲೇ ಮಣಿರತ್ನಂ ಚಿತ್ರಗಳಲ್ಲಿ ನಟಿಸಿರುವ ಹುಡುಗಿ. ಮಲಯಾಳಂ ಚಿತ್ರವೊಂದಕ್ಕೆ ಸಹನಿರ್ದೇಶಕಿಯಾಗಿಯೂ ಅನುಭವವಿರುವ ನಿತ್ಯಶ್ರೀ, ವೃತ್ರದ ನಾಯಕಿಯಾಗಿದ್ದಾರೆ.
ಇದು ನಿತ್ಯಶ್ರೀಗೆ ಮೊದಲ ಕನ್ನಡ ಸಿನಿಮಾ. ಇಂದಿರಾ ಅನ್ನೋ ಹೆಸರಿನ ಪೊಲೀಸ್ ಆಫೀಸರ್ ಪಾತ್ರ ಅವರದ್ದು. ಚಿತ್ರದಲ್ಲಿ ಸಾಹಸ ಸನ್ನಿವೇಶಗಳೇನಿಲ್ಲ. ಬುದ್ದಿವಂತಿಕೆಯ ಆಟವಿದೆ. ಗೌತಮ್ ಅಯ್ಯರ್ ನಿರ್ದೇಶನದ ಸಿನಿಮಾಗೆ, ಚಿತ್ರದ ಕಥೆಗೆ ಕಿರಣ್ ಬೇಡಿ ಸ್ಫೂರ್ತಿಯಂತೆ.